ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಸಂಘದ ಅಡಿಟ್ ವರದಿಯನ್ನು ಸಂಘದ ಸಿಇಓ ಚಂದ್ರಕಲಾಪಾಪೇಗೌಡ ಮಂಡಿಸಿ ರೈತರಿಗೆ 2023-24ನೇ ಸಾಲಿನಲ್ಲಿ ಕೆ.ಸಿ.ಸಿ.ಬೆಳೆ ಸಾಲವಾಗಿ 919 ಲಕ್ಷ,ಮಧ್ಯಾಮಾವಧಿ ಸಾಲ22 ಲಕ್ಷ, ದುಡಿಯುವ ಸಾಲವಾಗಿ 30 ಲಕ್ಷ ಸೇರಿದಂತೆ 10.2 ಕೋಟಿ ನೀಡಿರುವುದಾಗಿ ತಿಳಿಸಿದರು.
2024-25 ನೇ ಸಾಲಿನಲ್ಲಿ ಕೆ.ಸಿ.ಸಿ.ಬೆಳೆ ಸಾಲವನ್ನು 12 ಕೋಟಿ ರೂಗಳಿಗೆ ಹೆಚ್ಚಿಸಲು ಯೋಜನೆ ರೂಪಿಸಿದ್ದು ಸಂಘದ ಸಾಲ ಮಸೂಲಾತಿ ಶೇ.97 ರಷ್ಟಿದ್ದು 2023-24ನೇ ಸಾಲಿನಲ್ಲಿ ಸಂಘದ ಷೇರುದಾರ ರೈತರ ಸಹಕಾರ ದಿಂದ 4.32ಲಕ್ಷ ರೂ ಲಾಭಗಳಿಸಿದೆ ಎಂದು ತಿಳಿಸಿದರು.
ಕಳೆದ ಬಾರಿಯ ವಾರ್ಷಿಕ ಮಹಾಸಭೆಯಲ್ಲಿ ಖಾಲಿ ಚೀಲ, ಧಾರ್ಮಿಕ ನಿಧಿ ಹಂಚಿಕೆ, ವಾರ್ಷಿಕ ಮಹಾಸಭೆಯ ಖರ್ಚು, ಕಾಲಂ ನಂ 11 ರಲ್ಲಿ ಖರ್ಚು ಮಾಡಿರುವ ಲೆಕ್ಕದ ಕುರಿತ ಮಾಹಿತಿ ನೀಡುವಂತೆ ಕೋರಿದರು ಸಮರ್ಪಕವಾಗಿಆಡಳಿ ಉತ್ತರ ನೀಡದ ಹಿನ್ನಲೆಯಲ್ಲಿ ರೈತ ಎಚ್.ಎ ಪಣಿತಾ ಏರು ಧ್ವನಿಯಲ್ಲಿ ತೀವ್ರ ಚರ್ಚೆ ನಡೆಸಿದಾಗ ಜಿಲ್ಲಾ ಸಹಕಾರ ಬ್ಯಾಂಕಿನ ಮೇಲ್ವಿಚಾರಕ ಮೂಡಲ ಕೊಪ್ಪಲು ಎನ್.ದಿನೇಶ್ ಸೂಕ್ತ ಉತ್ತರ ನೀಡುವಂತೆ ಸಂಘದ ಸಿಇಓ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಷೇರುದಾರ ರೈತರು ಮೃತಪಟ್ಟರೇ ಅವರ ಕುಟುಂಬಕ್ಕೆ ಮರಣ ನಿಧಿಯಾಗಿ ಮೂರು ಸಾವಿರ ರೂಪಾಯಿಗಳನ್ನು ನೀಡುವುದು, ಮುಂದಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ವ್ಯಾಪ್ತಿಯ ಷೇರುದಾರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ನಿಗಧಿಮಾಡಿದ ಅಂಕಗಳಿಸಿದವರಿಗೆ ಸನ್ಮಾನಿಸುವುದು ಸೇರಿದಂತೆ ಇನ್ನಿತರ ವಿಚಾರಗಳನ್ನು ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು.
ಸಭೆಯಲ್ಲಿ ಸಂಘದ ಷೇರುದಾರ ರೈತರಾದ ಎ.ಕುಚೇಲ್ , ಬಿ.ರಮೇಶ್, ಪಾಂಡು, ಎಚ್.ಆರ್.ಮಧುಚಂದ್ರ, ಕೆ.ಮಹದೇವ್, ಎಚ್.ಟಿ.ಸುದರ್ಶನ್ , ಎಚ್.ಡಿ.ರಾಜು, ಎಚ್.ಆರ್.ಯಶವಂತ್, ಡಿ.ಸಿ.ರಾಮು, ಎಸ್.ಟಿ.ಕೀರ್ತಿ, ಎಚ್.ಡಿ.ಗೋಪಾಲ್, ಶಿವಸ್ವಾಮಿ, ವಿಜಿಯಣ್ಣ, ಎಚ್.ಬಿ.ಜಯಣ್ಣ ಮೊದಲಾದವರು ಸಂಘದ ಅಭಿವೃದ್ದಿಯ ಮತ್ತು ಲೋಪ-ದೋಷಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮೈಮಲ್ ಮಾಜಿ ಅಧ್ಯಕ್ಷ ಎ.ಟಿ.ಸೊಮಶೇಖರ್, ಸಂಘದ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್, ಸಂಘದ ಅಧ್ಯಕ್ಷ ಕೆಂಪನಾಯಕ, ಎಚ್.ಎಸ್.ಜಗದೀಶ್, ಎಸ್.ಬಿ.ಹುಚ್ಚೇಗೌಡ, ವಿವೇಕನಂದ, ಎಚ್.ಎನ್.ರಮೇಶ್ ಕಲ್ಯಾಣಮ್ಮ, ಸಿ.ಎಂ.ರಾಜೇಗೌಡ, ಎಚ್.ಆರ್.ಮಹೇಶ್, ಪಾರ್ಥಯ್ಯ, ಎಚ್.ಬಿ.ನವೀನ್ ಕುಮಾರ್, ಸಂಘದ ಸಿಬ್ಬಂದಿಗಳಾದ ರವಿ, ಅರುಣ, ಸಂತೋಷ, ಲೋಕೇಶ್ ಇದ್ದರು.