ವರದಿ: ವಿನಯ್ ದೊಡ್ಡಕೊಪ್ಪಲು
ಹೊಸೂರು : ಸಾಲಿಗ್ರಾಮ ತಾಲೂಕಿನ ಹೊಸೂರಿನ ಶ್ರೀರಾಮ ಪ್ರೌಢಶಾಲೆಯಲ್ಲಿಆಗಸ್ಟ್ ತಿಂಗಳಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲು ವಿದ್ಯಾರ್ಥಿ ಬಳಗ ತೀರ್ಮಾನ ಕೈಗೊಂಡು
ಮೈಸೂರಿನ ಲೇ ರುಚಿ ಹೊಟೇಲ್ ನಲ್ಲಿ ನಡೆದ ಶ್ರೀರಾಮ ಪ್ರೌಡ ಶಾಲೆಯ 1998-2000-01 ಸಾಲಿನ ವಿದ್ಯಾರ್ಥಿಗಳ ಸಭೆಯಲ್ಲಿ ಈ ತೀರ್ಮಾನಕೈಗೊಳ್ಳಲಾಯಿತು.
ಹಳೆಯ ವಿಧ್ಯಾರ್ಥಿಯಾದ ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ್ ಒಡೆಯರ್ ನೇತೃತ್ವದಲ್ಲಿ ಸಭೆ ಸೇರಿದ ಈ ಬ್ಯಾಚಿನ ವಿಧ್ಯಾರ್ಥಿಗಳು ಕಾರ್ಯಕ್ರಮ ಆದ್ದೂರಿಯಾಗಿ ಮಾಡಲು ನಿರ್ಣಯ ಕೈಗೊಂಡರು.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಸುವ ಮೂಲಕ ಶಾಲೆಯ ಶಿಕ್ಷರನ್ನು ಗೌರವಿಸಿ ಕೃತಜ್ಞತೆ ಸಲ್ಲಿಸಲು ತೀರ್ಮಾನ ಕೈಗೊಂಡರು.
ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ ಶಿಕ್ಷಕರಾದ ಎಚ್.ಎಸ್.ಬಸವರಾಜು, ಕೆ.ಎಸ್.ರಾಮಕೃಷ್ಣೇಗೌಡ, ಸಿ.ಬಿ.ಗೋವಿಂದೇಗೌಡ, ಎಸ್.ವಿ.ಯೋಗಣ್ಣ, ಎನ್.ಸಿ.ರಮೇಶ್ ಎಚ್.ಡಿ.ರಾಜಕುಮಾರ್, ಜಿ.ಜಿ.ಗೋಪಾಲೇಗೌಡ, ಎಚ್.ಪಿ.ಗೋವಿಂದೇಗೌಡ, ಜೆಮಪಿ.ಟಿ.ಸುಬ್ಬೇಗೌಡ, ಗುಮಾಸ್ತ ಸತ್ಯಣ್ಯ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ವಿನಯ್, ಜಯಶಂಕರ್ ,ಕೋಟಿ, ಎಚ್.ಎ.ಮಹೇಶ್, ಪುನೀತ್, ಕೆ.ಜಿ.ಕೃಷ್ಣ, ಮಹದೇವ್, ಕಾಂತರಾಜ್, ಹರೀಶ, ಕಾಂತರಾಜ್, ಕೆ.ಕೃಷ್ಣ, ಶಿವಣ್ಣ, ಪ್ರಕಾಶ್, ಹರೀಶ್, ಶ್ವೇತಾ, ಶಿಲ್ಪ, ರಂಜಿನಿ, ದೀಪಿಕಾ, ಪಲ್ಲವಿ, ಮಂಗಳಾ., ಬೇಬಿ, ಸೌಮ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.