Friday, April 11, 2025
Google search engine

Homeರಾಜ್ಯಸುದ್ದಿಜಾಲಹೊಸೂರು:ಇಂಜಿನಿಯರಾಗಿ ಬಡ್ತಿ ಹೊಂದಿ ವರ್ಗಾವಣೆ ಗೊಂಡ ಎಂ.ಈ.ನಾಗರಾಜುಗೆ ಸನ್ಮಾನ

ಹೊಸೂರು:ಇಂಜಿನಿಯರಾಗಿ ಬಡ್ತಿ ಹೊಂದಿ ವರ್ಗಾವಣೆ ಗೊಂಡ ಎಂ.ಈ.ನಾಗರಾಜುಗೆ ಸನ್ಮಾನ

ಹೊಸೂರು: ವೃತ್ತಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಕೆಲಸ ನಿರ್ವಹಿದಾಗ ವೃತ್ತಿ ಗೌರವಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದು ಹೊಸೂರು ಚೆಸ್ಕಾಂ ಶಾಖೆಯ ಇಂಜಿನಿಯರ್ ಡಿ. ಮಹದೇವ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಚೆಸ್ಕಾಂ ನಲ್ಲಿ ಮೇಲ್ವಿಚಾರಕ ರಾಗಿ 12 ವರ್ಷ ಕೆಲಸ ನಿರ್ವಹಿಸಿ ಇಂಜಿನಿಯರಾಗಿ ಬಡ್ತಿ ಹೊಂದಿ ವರ್ಗಾವಣೆ ಗೊಂಡ ಎಂ.ಈ.ನಾಗರಾಜು ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಮತ್ತು ವಿವಿದ ಸರ್ಕಾರಿ ನಿಗಮಗಳಲ್ಲಿ ಕೆಲಸ ನಿರ್ವಹಿಸುವ ಯಾವುದೇ ನೌಕರ ಜನಪರ ಕೆಲಸಗಳನ್ನು ಮಾಡಿ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲು ಮುಂದಾಗಬೇಕು. ಇದರಿಂದ ಆ ನೌಕರ ಜನ ಮಾನಸದಲ್ಲಿ ಉಳಿಯಲು ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ನಾಗರಾಜು ಅವರ ಸೇವೆ ಶ್ಲಾಘನೀಯ ಎಂದರು.
ಸನ್ಮಾನ ಸ್ವೀಕರಿಸಿ ಎಂ.ಈ.ನಾಗರಾಜು ಮಾತನಾಡಿ ಕಳೆದ 12 ವರ್ಷಗಳಿಂದ ಹೊಸೂರು ಚೆಸ್ಕಾಂ ಶಾಖೆಯಲ್ಲಿ ಮೇಲ್ವಿಚಾರಕರಾಗಿ ಮತ್ತು ಪ್ರಭಾರ ಇಂಜಿನಿಯರ್ ಆಗಿ ರೈತರು ಮತ್ತು ಸಾರ್ವಜನಿಕರಿಗೆ ಚೆಸ್ಕಾಂನ ಸೌಲಭ್ಯಗಳು ಮತ್ತು‌ ಸವಲತ್ತು ಒದಗಿಸಲು ಸಹಕಾರ ನೀಡಿದ ಇಲ್ಲಿನ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಚೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಜಯಕುಮಾರ್, ಸಿಬ್ಬಂದಿಗಳಾದ ಮಮತಾ, ಗೋವಿಂದ,ಅಜಯ್,ಜಲೇಂದ್ರ,ಬೀರಪ್ಪ, ಎಸ್.ಕುಮಾರ್, ಚರಣ್ ಕುಮಾರ್,ಶಶಿಕುಮಾರ್,ಕುಮಾರ ಕಟ್ಟಿಮನಿ,ಲಕ್ಷ್ಮಣ್ ಕುರಿಗಾರ್, ಗಣೇಶ್, ಉಪ್ಪಾರ್ ಸಂತೋಷ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular