ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಜಯನಗರ ಕಾಲೇಜ್ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ವಿಜಯನಗರ ಕಿಂಗ್ಸ್ ಕೋರ್ಟ್ ಹೋಟೆಲ್ ಉಧ್ಘಾಟನೆ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಚಲನಚಿತ್ರ ನಟ ನಿರ್ಮಾಪಕ ,ಕ್ರೇಜಿ ಸ್ಟಾರ್ ಶ್ರೀ ವಿ.ರವಿಚಂದ್ರನ್ ಹೊಸಪೇಟೆ ನಗರಕ್ಕೆ ಆಗಮಿಸಿದ್ದರು.
ಕಿಂಗ್ಸ್ ಕೋರ್ಟ್ ಹೊಟೇಲ್ ಮುಖ್ಯಸ್ಥರಾದ ನಾಗೇಶ್ ಪಾಟೀಲ್ ಜೊತೆಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ , ವಿಜಯನಗರ ಕ್ಷೇತ್ರದ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪ, ಶಾಸಕ ಹಾಗೂ ಮಾಜಿ ಸಚಿವ ಈ ತುಕಾರಾಂ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಬೃಹತ್ ಹಾರ ಹಾಕಿ, ಜೈಕಾರ ಕೂಗುತ್ತ ತೆರೆದ ವಾಹನದಲ್ಲಿ ಮೂಲಕ, ವಿಜಯನಗರ ಕಿಂಗ್ಸ್ ಕೋರ್ಟ್ ಹೋಟೆಲ್ ವರೆಗೂ ಮೆರವಣಿಗೆ ಮೂಲಕ ಕರೆತರಲಾಯಿತು. ಹೊಟೇಲ್ ಉದ್ಘಾಟಿಸಿ ಮಾತನಾಡಿದ ರವಿಚಂದ್ರನ್ ನೂತನ ಹೋಟೆಲ್ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಹಲವಾರು ಹಿರಿಯ ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.
