Saturday, April 12, 2025
Google search engine

Homeಅಪರಾಧಮನೆ ಕಳವು ಪ್ರಕರಣ: ಇಬ್ಬರ ಬಂಧನ

ಮನೆ ಕಳವು ಪ್ರಕರಣ: ಇಬ್ಬರ ಬಂಧನ

ಮಂಗಳೂರು(ದಕ್ಷಿಣ ಕನ್ನಡ):ಎರಡು ಪ್ರತ್ಯೇಕ ಮನೆ ಕಳವು ಪ್ರಕರಣದ ಇಬ್ಬರನ್ನು ಮಂಗಳೂರಿನ ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ್ರಾನ್ನು ತೌಸೀಫ್‌ ಅಹಮ್ಮದ್ (34), ಫರಾಜ್ (27) ಎಂದು ಗುರುತಿಸಲಾಗಿದೆ. ಬಂಧಿತರಿಂದ 41 ಲಕ್ಷ ರೂಪಾಯಿ ಮೌಲ್ಯದ ಒಟ್ಟು 75 ಗ್ರಾಂ ತೂಕದ ಚಿನ್ನಾಭರಣಗಳು, ಕಳವು ಮಾಡಲು ಉಪಯೋಗಿಸಿದ್ದ 50 ಸಾವಿರ ರೂಪಾಯಿ ಮೌಲ್ಯದ ಒಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಪಣಂಬೂರು ಗ್ರಾಮದ ಕುದುರೆಮುಖ ಜಂಕ್ಷನ್‌ ಬಸ್ಸು ನಿಲ್ದಾಣದ ಬಳಿ ಅನುಮಾನ್ಪದವಾಗಿ ಇರುವುದನ್ನು ಕಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 2021ರ ಮಾರ್ಚ್‌ನಲ್ಲಿ ಮಂಗಳೂರು ತಾಲೂಕಿನ ಬಡಗುಳಿವಾಡಿ ಗ್ರಾಮದ ಮನಲಪದವು ರಸ್ತೆಯ ಬದಿಯಲ್ಲಿರುವ ಸದಾಶಿವ ಸಾವಂತ ಎಂಬವರ ಮನೆಯ ಬೀಗ ಮುರಿದು ಮನೆಗಳಿಂದ ಕಳವು ಮಾಡಿರುವ ಕುರಿತು ಮತ್ತು 2023ರ ನವೆಂಬರ್‌ ನಲ್ಲಿ ಮಂಗಳೂರು ತಾಲೂಕು ಅದ್ದೂರು ಗ್ರಾಮದ ಪುಣಿ ಜೋಡಿಯ ರಸ್ತೆಯ ಬದಿಯಲ್ಲಿರುವ ಸದಾಶಿವ ಪೂಜಾರಿ ಎಂಬವರ ಮನೆಯ ಬೀಗ ಮುರಿದು ಕಳವುಗೈದಿರುವ ಕುರಿತು ಇವರು ತಪ್ಪೊಪ್ಪೊಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ವಿರುದ್ಧ ಮಂಗಳೂರು ನಗರ ಪಣಂಬೂರು ಪೊಲೀಸ್ ಠಾಣೆ, ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ, ಬಂಟ್ವಾಳ ನಗರ ಪೊಲೀಸ್‌ ಠಾಣೆ, ಮತ್ತು ಉಡುಪಿ ನಗರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular