ಮೈಸೂರು: ಬುಧವಾರ ಸುರಿದ ಧಾರಕಾರ ಮಳೆಗೆ ಒಂದೇ ಗ್ರಾಮದ ಎರಡು ಮನೆಗಳು ಕುಸಿತಗೊಂಡಿದ್ದು, ಅದೃಷ್ಟಾವಶತ್ ಮನೆಯ ವೃದ್ಧರೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಜಯಪುರ ಹೋಬಳಿಯ ಗೋಪಾಲಪುರದ ಗ್ರಾಮದ ದೇವಮ್ಮ ಮತ್ತು ಸಣ್ಣ ತಾಯಮ್ಮ ಎಂಬುವರಿಗೆ ಸೇರಿದ ಮನೆಗಳು ಕುಸಿತಗೊಂಡಿವೆ.
ಒಂದು ಮನೆಯಲ್ಲಿ ಗೋಡೆಯೊಂದು ಕುಸಿದು ಮನೆಯಲ್ಲಿ ಇದ್ದ ವಸ್ತುಗಳು ಹಾನಿಯಾದರೇ ಮತ್ತೊಂದು ಮನೆಯೂ ಸಂಪೂರ್ಣ ಕುಸಿತಗೊಂಡ ಪರಿಣಾಮ ಮನೆಯ ಒಳಗಡೆ ಇದ್ದ ವೃದ್ಧ ರಾಜೇಗೌಡ ಎಂಬುವರು ಚಾವಣಿಗಳ ಅಡಿ ಸಿಲುಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆಯ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬ ಬೀದಿಗೆ ಬಂದಂತಾಗಿದೆ . ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ್ದಾರೆ.
