ಹೆಗ್ಗಡದೇವನ ಕೋಟೆ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯೊಂದು ಕುಸಿದಿರುವ ಘಟನೆ ತಾಲ್ಲೂಕಿನ ತೊರವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೂಲಿ ಕಾರ್ಮಿಕ ಸಿದ್ದರಾಜು ಎಂಬವರ ಮನೆ ಕುಸಿದಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚಿಸಿ, ಮನೆ ಕುಸಿತ ಸಂಬಂಧ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ. ಕಳೆದ ೩೫ ವರ್ಷಗಳಿಂದಲೂ ವಾಸಿಸುತ್ತಿದ್ದ ಮನೆ ದಿಢೀರನೆ ಕುಸಿದಿದೆ. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ನೆರವು ನೀಡುವಂತೆ ಸಿದ್ದರಾಜು ಮನವಿ ಮಾಡಿದ್ದಾರೆ.