ನಾಗಮಂಗಲ: ಶ್ರೀರಾಮ ಮಂದಿರದಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಪುಣ್ಯದ ಕೆಲಸ ನಮಗೆಲ್ಲ ಲಭಿಸಿರುವುದು ನಮ್ಮೆಲ್ಲರ ಸೌಭಾಗ್ಯವೆಂದು ಹಿರಿಯ ಯೋಗ ಶಿಕ್ಷಕ ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗದಿಂದ ವಿಶ್ವ ಹಿಂದೂ ಪರಿಷತ್ ಭಜರಂಗ ದಳದವತಿಯಿಂದ ಆಯೋಜಿಸಲಾಗಿದ್ದ ಅಯೋಧ್ಯಾ ಶ್ರೀರಾಮ ಜನ್ಮ ಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪ್ರತೀ ಹಿಂದೂ ಮನೆಗಳಿಗೆ ತಲುಪಿಸುವ ಸಂದರ್ಭದಲ್ಲಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ಜನವರಿ ೨೨ರಂದು ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಲೋಕಾರ್ಪಣೆ ಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಈ ಸಮಯದಲ್ಲಿ ಕೆಲವು ಆಚಾರ ವಿಚಾರಗಳನ್ನು ಪಾಲಿಸಬೇಕಾಗುತ್ತದೆ ಮಂತ್ರಾಕ್ಷತೆ ವಿತರಿಸುವ ಸಮಯದಲ್ಲಿ ಕಾಲಿಗೆ ಚಪ್ಪಲಿ ಧರಿಸುವುದು ಮಾಂಸಾಹಾರ ಸೇವನೆ ಇದ್ಯಾವುದೂ ಮಾಡಬಾರದು ರಸ್ತೆಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿನೀಡದೆ ಮನೆಗಳ ಒಳಗೆ ಪ್ರವೇಶಿಸಿ ಮಂತ್ರಾಕ್ಷತೆ ನೀಡಬೇಕು ಜೊತೆಯಲ್ಲಿ ಪ್ರಭು ಶ್ರೀರಾಮನ ಫೋಟೋ ಹಾಗೂ ಮಾಹಿತಿ ಪತ್ರಕ ನೀಡಲಾಗುವುದು ಯಾವುದೇ ಜಾತಿಭೇದವಿಲ್ಲದೆ ರಾಜಕೀಯ ಪಕ್ಷಗಳ ನಂಟಿಲ್ಲದೆ ಎಲ್ಲರೂ ಈ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ತುಂಬಾ ಸಂತೋಷವಾಗಿದೆ ಬೆಳ್ಳೂರು, ಬಿಂಡಿಗನವಿಲೆ, ಬ್ರಹ್ಮದೇವರಹಳ್ಳಿ, ದೇವಲಾಪುರ ಗಳಲ್ಲಿ ಏಕಕಾಲದಲ್ಲಿ ಶ್ರೀರಾಮ ಭಕ್ತರು ವಾದ್ಯ ಗೋಷ್ಠಿಗಳೊಂದಿಗೆ ಮನೆ ಮನೆಗೆ ತಲುಪಿಸುತ್ತಿದ್ದಾರೆ.
ವಿಶೇಷವಾಗಿ ಪಟ್ಟಣದಲ್ಲಿ ಭಗವಾನ್ ಶ್ರೀರಾಮನ ರಥದೊಂದಿಗೆ ವಾಸವಿ ಭಜನಾ ಮಂಡಳಿಯವರಿಂದ ಸಂಕೀರ್ತನಾ ಯಾತ್ರೆ ಮನೆ ಮನೆಗಳ ಮುಂದೆ ಸಂಚರಿಸಿತು ಈ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಸಂಚಾಲಕ ಪುಣ್ಯಕೋಟಿ ರಘು, ಕಾಲಿಸ್ ಮಹೇಶ್, ಕಾರ್ತಿಕ್ , ಶ್ರೀರಾಮ ಭಕ್ತರಾದ ಕೋದಂಡರಾಮು, ಶ್ರೀನಿವಾಸ್, ಅರ್ಜುನ್ ಜೀ, ನಂಜೇಶ, ಚೇತನ್, ಗೋಪಿ, ದಿವಾಕರ್, ಸೇರಿದಂತೆ ನೂರಾರು ಸ್ವಯಂಸೇವಕರು ರಾಮಭಕ್ತರು ಭಾಗವಹಿಸಿದ್ದರು.