Friday, April 11, 2025
Google search engine

Homeರಾಜ್ಯಗೃಹಲಕ್ಷ್ಮಿ ಹಣ ಬರುತ್ತಿಲ್ಲ, ರೈತರಿಗೆ ಪ್ರೋತ್ಸಾಹಧನವಿಲ್ಲ : ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಆರೋಪ

ಗೃಹಲಕ್ಷ್ಮಿ ಹಣ ಬರುತ್ತಿಲ್ಲ, ರೈತರಿಗೆ ಪ್ರೋತ್ಸಾಹಧನವಿಲ್ಲ : ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಆರೋಪ

ಬೆಂಗಳೂರು : ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯನವರ ದುರಾಡಳಿತದಲ್ಲಿ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ರೈತರಿಗೆ ಪ್ರೋತ್ಸಾಹಧನವಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್. ಅಶೋಕ್, ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯನವರ ದುರಾಡಳಿತದಲ್ಲಿ, ಗುತ್ತಿಗೆದಾರರ ಬಾಕಿ ಹಣ ಪಾವತಿಗೆ ದುಡ್ಡಿಲ್ಲ, ಸರ್ಕಾರಿ ನೌಕರರ ವೇತನ ಹೆಚ್ಚಳವಿಲ್ಲ, ಗೃಹಲಕ್ಷಿ ಹಣ ಬರುತ್ತಿಲ್ಲ, ರೈತರಿಗೆ ಪ್ರೋತ್ಸಾಹಧನವಿಲ್ಲ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಭಂಡ ಸರ್ಕಾರವೆಂದರೆ ಅದು ರೈತ ವಿರೋಧಿ, ರೈತ ಹಂತಕ ಸಿದ್ದರಾಮಯ್ಯ ಸರ್ಕಾರ. ರೈತ ಹಂತಕ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ರಾಜ್ಯದ ೧,೧೮೨ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್‌ನ ರೈತ ವಿರೋಧಿ ನೀತಿಯ ಜ್ವಲಂತ ನಿದರ್ಶನ. ಪರಿಹರಕ್ಕಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅವಹೇಳನ ಮಾಡುತ್ತಾ, ರೈತರಿಗೆ ಸಿಗಬೇಕಾದ ಪರಿಹಾರ ಕೊಡದೇ ಮೀನಮೇಷ ಎಣಿಸುತ್ತಾ ಕಾಲಹರಣ ಮಾಡಿದ ಕಾಂಗ್ರೆಸ್ ಸರ್ಕಾರ ರೈತರನ್ನ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular