ತುಮಕೂರು : ತುಮಕೂರಿನ ಬಟವಾಡಿ ಚಿನ್ಮಯಿ ನರ್ಸಿಂಗ್ ಹೋಂನಲ್ಲಿ ಆಪರೇಷನ್ ಸಂದರ್ಭದಲ್ಲಿ ಗೃಹಿಣಿ ಸಾವುನಪ್ಪಿರುವ ಘಟನೆ ನಡೆದಿದೆ.
ಗರ್ಭಕೋಶದಲ್ಲಿ ಮೂರು ಗ್ರಾಂ ಗಡ್ಡೆ ತೆಗೆಯಬೇಕೆಂದು ದಾಖಲು ಮಾಡಿಕೊಂಡಿದ್ದ ವೈದ್ಯರು, ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದರು. ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಾನಸ ಹಾಗೂ ಅರುಣ್. ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಆಪರೇಷನ್ ಮಾಡುವಾಗ ಮಾನಸ ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರುಣ ಎಂದು ಪತಿ ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿದರು. ಹೊಸ ಬಡಾವಣೆ ಪೊಲೀಸ್ ಠಾಣೆಗೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.