Sunday, April 20, 2025
Google search engine

Homeಅಪರಾಧಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣ: ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಪತಿ

ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣ: ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಪತಿ

ಚಿಕ್ಕಮಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ ಶ್ವೇತಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪತಿ ದರ್ಶನ್ ರಾಗಿ ಮುದ್ದೆಯಲ್ಲಿ ಸೈನೆಡ್ ಬೆರೆಸಿ ನೀಡಿದ್ದು, ಇದರಿಂದ ಪತ್ನಿ ಶ್ವೇತಾ ಮೃತಪಟ್ಟಿದ್ದಾಳೆಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಸಂಬಂಧ ಪತಿ ದರ್ಶನ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಗೆ ಒಳಪಡಿಸಿದಾಗ ತಾನೇ ಮುದ್ದೆಯಲ್ಲಿ ಸೈನೆಡ್ ಬೆರೆಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಅಕ್ರಮ ಸಂಬಂಧವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ರಾತ್ರಿ ಊಟದಲ್ಲಿ ರಾಗಿ ಮುದ್ದೆಯಲ್ಲಿ ಸೈನೆಡ್ ಹಾಕಿದ್ದು, ಶ್ವೇತಾ ಸಾವನಪ್ಪಿದ ಮೇಲೆ ಸಿರಿಂಜ್ ನಿಂದ ಇಂಜಕ್ಷನ್ ನೀಡಿದ್ದಾನೆ. ಇಂಜಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದಾನೆ. ತನ್ನ ಪ್ಲಾನ್ ಉಲ್ಟಾ ಆಗುವ ಆತಂಕದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಬಿಂಬಿಸಿದ್ದಾನೆ.

ಪತಿ ದರ್ಶನ್ ಕೊಲೆ ಮಾಡಿದ್ದು, ಪ್ರಕರಣದ ಹಾದಿ ತಪ್ಪಿಸುವ ತುರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದು, ಶ್ವೇತಾ ಕುಟುಂಬಸ್ಥರು ಕೊಲೆ ಮಾಡಿರುವುದಾಗಿ ಶಂಕಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು.

ಈ ಸಂಬಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆ ಪ್ರತಿಕ್ರಿಯಿಸಿ, ತನಿಖೆಯಲ್ಲಿ ದರ್ಶನ್ ಪತ್ನಿ ಶ್ವೇತಾ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರು ಲ್ಯಾಬ್ ಟ್ನೆಕ್ಷಿಶಿಯನ್ ಆಗಿದ್ದು, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಲ್ಯಾಬ್ ಇದೆ. ಎಸ್ ಎಫ್ ಎಲ್ ವರದಿ ಬಳಿಕ ಏನನ್ನು ತಿನ್ನಿಸಿದ್ದಾನೆ ಎಂದು ಸ್ಪಷ್ಟವಾಗಲಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ದರ್ಶನ್ ಬಂಧನದ ಬಳಿಕ ಅಕ್ರಮ ಸಂಬಂಧ ಹೊಂದಿದ್ದ ಬೆಂಗಳೂರಿನ ಮಹಿಳೆ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular