ಆಹಾ! ಈ ಚಳಿಗಾಲದಲ್ಲಿ ಸಂಜೆ ಹೊತ್ತು ಸ್ನಾಕ್ಸ್ ಗೆ ಏನಾದರೂ ಮಾಡಿಕೊಂಡು ತಿನ್ನಬೇಕು
ಅನಿಸುತ್ತಿದೆಯೇ…… ಹಾಗಾದರೆ ತುಂಬಾ ಸರಳವಾಗಿ ಹಾಗೂ ರುಚಿಕರವಾಗಿ ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಮಶ್ರೂಮ್ ಕಬಾಬ್ ವಿಧಾನ ಈ ಕೆಳಗಿನಂತಿದೆ……..
ರುಚಿಕರವಾದ ಮಶ್ರೂಮ್ ಕಬಾಬ್ ಮಾಡುವ ವಿಧಾನ…
ಬೇಕಾಗುವ ಪದಾರ್ಥಗಳು…
ಮಶ್ರೂಮ್ – 200 ಗ್ರಾಂ, ಕಬಾಬ್ ಪೌಡರ್ –ಒಂದು ಪ್ಯಾಕೆಟ್ , ಶುಂಠಿ– ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಖಾರದಪುಡಿ –ಅರ್ಧ ಚಮಚ ,ಚಿಕನ್ ಮಸಾಲ– ಅರ್ಧ ಚಮಚ, ಮೊಟ್ಟೆ –ಒಂದು, ಉಪ್ಪು- ರುಚಿಗೆ ತಕ್ಕಷ್ಟು ಎಣ್ಣೆ – ಸ್ವಲ್ಪ.
ಮಶ್ರೂಮ್ ಕಬಾಬ್ ಮಾಡುವ ವಿಧಾನ…
ಮಶ್ರೂಮ್ ಗಳನ್ನು ಚೆನ್ನಾಗಿ ತೊಳೆದುಕೊಂಡು ಇದಕ್ಕೆ ಕಬಾಬ್ ಪೌಡರ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ ,ಕಾರದಪುಡಿ ಅರ್ಧ ಚಮಚ, ಚಿಕನ್ ಮಸಾಲಾ ಪುಡಿ ಜೊತೆಗೆ ಒಂದು ಮೊಟ್ಟೆ ಹಾಗೂ ಸ್ವಲ್ಪ ಎಣ್ಣೆ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆ ಹಿಡಿಯುವವರಿಗೆ ಚೆನ್ನಾಗಿ ಕೈ ಆಡಿಸಿ ಕಲೆಸಿಕೊಳ್ಳಬೇಕು , ನಂತರ 10 ರಿಂದ 15 ನಿಮಿಷಗಳ ಕಾಲ ಅದನ್ನು ನೆನೆಯಲ್ಲಿ ಬಿಟ್ಟು , ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ಈಗಾಗಲೇ ನೆನೆಸಿಟ್ಟಿದ್ದ ಮಶ್ರೂಮ್ ಹಾಕಿ ಅದು ಕೆಂಪು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿದರೆ ಬಿಸಿ ಬಿಸಿಯಾದ ಮಶ್ರೂಮ್ ಕಬಾಬ್ ಸವಿಯಲು ನಿಮಗೆ ರೆಡಿಯಾಗುತ್ತದೆ.