Monday, December 2, 2024
Google search engine

Homeಅಡುಗೆರುಚಿ ರುಚಿಯಾದ ಮಟನ್ ಕೈಮಾ ವಡೆ ಮಾಡಿಕೊಳ್ಳುವ ವಿಧಾನ

ರುಚಿ ರುಚಿಯಾದ ಮಟನ್ ಕೈಮಾ ವಡೆ ಮಾಡಿಕೊಳ್ಳುವ ವಿಧಾನ

ಮಟನ್ ಕೈಮಾ ತಂದು ಮನೆಯಲ್ಲಿಯೇ ರುಚಿರುಚಿಯಾದ ಕೈಮಾ ವಡೆ ಮಾಡಿಕೊಳ್ಳಲು ಈ ಕೆಳಗಿನ ವಿಧಾನವನ್ನು ಅನುಸರಿಸಿ……..

ಕೈಮಾ ವಡೆ ಮಾಡಿಕೊಳ್ಳಲು ಬೇಕಾಗುವ ಪದಾರ್ಥಗಳು

ಮಟನ್ ಕೈಮಾ- 500 ಗ್ರಾಂ ಹಸಿ ಮೆಣಸಿನಕಾಯಿ – 1,ಈರುಳ್ಳಿ – 2 ಸಣ್ಣಗೆ ಕತ್ತರಿಸಿದ್ದು ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು, ಸ್ವಲ್ಪ ಚಕ್ಕೆ, ಲವಂಗ ಪುಡಿ – 1/4 ಟೀಚಮಚ ಅಚ್ಚ ಖಾರದ ಪುಡಿ- 1 ಚಮಚ ದನಿಯಾ ಪುಡಿ- ಅರ್ಧ ಚಮಚ ಕಡಲೆ ಹಿಟ್ಟು- 1 ಚಮಚ ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಪಾತ್ರೆಯೊಂದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಕಡಲೆ ಹಿಟ್ಟು- 1 ಚಮಚ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಎಣ್ಣೆ ಕಾಕಿ. ಇದೀಗ ಮಸಾಲೆ ಮಿಶ್ರಣವನ್ನು ವಡೆಗಳಾಗಿ ತಟ್ಟಿ, ಎಣ್ಣೆಗೆ ಬಿಡಿ, ಮಧ್ಯಮ ಉರಿಯಲ್ಲಿ ಚೆನ್ನಾಗಿ ಎರಡೂ ಬದಿಯಲ್ಲಿ ಬೇಯಿಸಿದರೆ, ಬಾಯಿ ಚಪ್ಪರಿಸಿ ತಿನ್ನುವಂತಹ ರುಚಿಕರವಾದ ಕೈಮಾವಡೆ ಸವಿಯಲು ಸಿದ್ಧವಾಗುತ್ತದೆ. ಇನ್ನೇಕೆ ತಡ ಹಾಗಾದರೆ ಮಟನ್ ಕೈಮ ತಂದು ಮನೆ ಮಂದಿಗೆಲ್ಲ ಕೈಮ ವಡೆ ಮಾಡಲು ಸಿದ್ದರಾಗಿ……….

RELATED ARTICLES
- Advertisment -
Google search engine

Most Popular