ಹಣ್ಣುಗಳ ರಾಜ ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಸದ್ಯ ಬೇಸಿಗೆ ಕಾಲ ಆಗಿರುವುದರಿಂದ ಮಾವಿನ ಹಣ್ಣಿನಿಂದ ಬಗೆಬಗೆಯ ರೆಸಿಪಿಗಳನ್ನು ಜನ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಮಾವಿನ ಖಾದ್ಯಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತವೆ.
ಅದರಲ್ಲೂ ಮಕ್ಕಳಿಗೆ ಮಾವಿನ ಜೆಲ್ಲಿ ಎಂದರೆ ತುಂಬಾ ಇಷ್ಟ. ಹಾಗಾಗಿ ಅಂಗಡಿಗೆ ಹೋದಾಗಲೆಲ್ಲಾ ಪೋಷಕರಿಗೆ ಮಾವಿನ ಜೆಲ್ಲಿ ಕೊಡಿಸುವಂತೆ ಹಠ ಮಾಡುತ್ತಾರೆ. ಆದರೆ ಹೊರಗೆ ಜೆಲ್ಲಿ ಕೊಡಿಸುವ ಬದಲು ಮನೆಯಲ್ಲಿಯೇ ಜೆಲ್ಲಿಯನ್ನು ತಯಾರಿಸಿ ಮಕ್ಕಳಿಗೆ ಕೊಡಿ.
ಬೇಕಾಗುವ ಸಾಮಾಗ್ರಿಗಳು:
ಹಸಿ ಮಾವಿನ ಹಣ್ಣು- 4 ರಿಂದ 5, ಸಕ್ಕರೆ – 2 ರಿಂದ 3 ಟೀಸ್ಪೂನ್, ಫುಡ್ ಕಲರ್ – 1 ಟೀಸ್ಪೂನ್, ತೆಂಗಿನಕಾಯಿ – ಅರ್ಧ ಬೌಲ್, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು, ಬ್ಲ್ಯಾಕ್ ಸಾಲ್ಟ್ – ರುಚಿಗೆ ತಕ್ಕಷ್ಟು.
ಮೊದಲು ಹಸಿ ಮಾವಿನ ಹಣ್ಣನ್ನು ತೆಗೆದುಕೊಂಡು ಸಿಪ್ಪೆ ಸುಲಿದು ತುರಿದು ಬಟ್ಟಲೊಂದರಲ್ಲಿ ಹಾಕಿ ಪ್ರತ್ಯೇಕವಾಗಿ ಇಡಿ. ಈಗ ರುಚಿಗೆ ತಕ್ಕಷ್ಟು ಕಪ್ಪು ಉಪ್ಪು ಮತ್ತು ಫುಡ್ ಕಲರ್ ಹಾಕಿ.
ನಿಮ್ಮ ಆಯ್ಕೆಯ ಪ್ರಕಾರ ನೀವು ಯಾವ ಕಲರ್ ಬೇಕಾದರೂ ಆಯ್ಕೆ ಮಾಡಬಹುದು. ಮಕ್ಕಳಿಗೆ ಇಷ್ಟವಾಗುವ ಬಣ್ಣವನ್ನೂ ಕೂಡ ಇದಕ್ಕೆ ಬಳಸಬಹುದು. ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಠ ಅರ್ಧ ಗಂಟೆಯವರೆಗೂ ಬಿಸಿ ಮಾಡಿ.
ನಂತರ ಸ್ಟವ್ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿ. ಇದಕ್ಕೆ ತುಪ್ಪವನ್ನು ಸೇರಿಸಿ. ‘5 ರಿಂದ 10 ನಿಮಿಷಗಳ ಕಾಲ ಹುರಿಯಿರಿ. ನಂತರ ಇದಕ್ಕೆ ಸಕ್ಕರೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ.
ಸಕ್ಕರೆ ಕರಗಿದಾಗ ಉರಿಯನ್ನು ಆಫ್ ಮಾಡಿ. ಎಲ್ಲವನ್ನೂ ಒಂದು ಬಟ್ಟಲಿಗೆ ಹಾಕಿ. ಸ್ವಲ್ಪ ತಣ್ಣಗಾದ ನಂತರ ಫ್ರಿಜ್ ನಲ್ಲಿಡಿ. ಈಗ ಟೇಸ್ಟಿಯಾಗಿರುವ ಹುಳಿ-ಸಿಹಿ ಮಾವಿನ ಜೆಲ್ಲಿ ಸವಿಯಲು ಸಿದ್ಧ.