ಮಾಂಸಾಹಾರ ಪ್ರಿಯರಿಗೆ ಖಾರದ, ರುಚಿಕರ ಮಟನ್ ಕರಿ ಎಂದರೆ ನುಣುಪಾದ ಬಾಯಿಗೆ ನೀರೂರಿ ಬರುವಂತದ್ದು. ಅತಿಥಿಗಳು ಮನೆಗೆ ಬಂದಾಗ ಅಥವಾ ವಿಶಿಷ್ಟ ದಿನಗಳಲ್ಲಿ ಮನೆಯಲ್ಲೇ ಸುಲಭವಾಗಿ ಈ ರುಚಿಕರ ಮಟನ್ ಕರಿ ತಯಾರಿಸಬಹುದು. ಇಲ್ಲಿದೆ ಸರಳ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳು:
ಬೇಕಾಗುವ ಪದಾರ್ಥಗಳು:
- ಕುರಿ ಮಾಂಸ – 1 ಕೆಜಿ
- ಟೊಮೆಟೊ – 2
- ಈರುಳ್ಳಿ – 2
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
- ಗರಂ ಮಸಾಲೆ – 1 ಚಮಚ
- ಧನಿಯಾ ಪುಡಿ – 2 ಚಮಚ
- ಜೀರಿಗೆ ಪುಡಿ – 2 ಚಮಚ
- ಖಾರದ ಪುಡಿ – 5 ಚಮಚ
- ಅರಿಶಿಣ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ತೆಂಗಿನ ಎಣ್ಣೆ – ಅರ್ಧ ಕಪ್
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಮೊದಲು ಕುಕ್ಕರ್‌ನಲ್ಲಿ ಕುರಿ ಮಾಂಸ, ತೆಂಗಿನ ಎಣ್ಣೆ ಮತ್ತು ಉಪ್ಪು ಹಾಕಿ 3-4 ವಿಶಿಲ್ ಬಾಡಿಸಿಕೊಳ್ಳಿ.
ಮಿಕ್ಸಿಯಲ್ಲಿ ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ರುಬ್ಬಿ ಪೇಸ್ಟ್ ಮಾಡಿ.
ಬಾಣಲೆಗೆ ಎಣ್ಣೆ ಹಾಕಿ ಪೇಸ್ಟ್ ಅನ್ನು ಹಾಕಿ, ಮಸಾಲೆ ಪುಡಿಗಳು ಸೇರಿಸಿ ಚೆನ್ನಾಗಿ ಹುರಿಯಿರಿ.
ಬಾಡಿಸಿದ ಮಾಂಸವನ್ನು ಮಿಕ್ಸಿನಲ್ಲಿ ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪು ಸೇರಿಸಿ. ಸಿದ್ಧವಾಗಿದೆ ರುಚಿಯಾದ ಮಟನ್ ಕರಿ!