Tuesday, April 22, 2025
Google search engine

Homeರಾಜ್ಯಸುದ್ದಿಜಾಲತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಎಚ್.ಆರ್.ರಾಜಗೋಪಾಲ್ ಅವಿರೋಧ ಆಯ್ಕೆ

ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಎಚ್.ಆರ್.ರಾಜಗೋಪಾಲ್ ಅವಿರೋಧ ಆಯ್ಕೆ

ಗುಂಡ್ಲುಪೇಟೆ: ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಎಚ್.ಆರ್.ರಾಜಗೋಪಾಲ್ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘವನ್ನು ರಚನೆ ಮಾಡಿ, ನಂತರ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅವಿರೋಧ ಆಯ್ಕೆ: ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಎಚ್.ಆರ್.ರಾಜಗೋಪಾಲ್, ಉಪಾಧ್ಯಕ್ಷರಾಗಿ ಅಂಕಹಳ್ಳಿ ವೀರಭದ್ರಪ್ಪ, ಕಾರ್ಯದರ್ಶಿಯಾಗಿ ಲಕ್ಕೂರು ಚಂದ್ರು, ಖಚಾಂಚಿಯಾಗಿ ನಾಗೇಂದ್ರ(ಪಿಂಟು), ನಿರ್ದೇಶಕರಾಗಿ ಬೇಗೂರು ಮಣಿಕಂಠ, ಹಂಗಳ ನಂಜಪ್ಪ, ವೆಂಕಟೇಶ್, ಸೋಮಶೇಖರ್, ಸುಬ್ರಹ್ಮಣ್ಯ, ವಿಶ್ವನಾಥ ಭಾರದ್ವಾಜ್, ಕೊಡಗಾಪುರ ಪುಟ್ಟಸ್ವಾಮಿ, ಶೇಖರ್ ಬೇಗೂರು, ಭೀಮನಬೀಡು ಪುಟ್ಟಶೆಟ್ಟಿ ಆಯ್ಕೆಯಾಗಿದ್ದಾರೆ.

ಈ ವೇಳೆ ತಾಲೂಕು ಪತ್ರಿಕಾ ವಿತರಕರ ಸಂಘದ ನೂತನ ಅಧ್ಯಕ್ಷ ಎಚ್.ಆರ್.ರಾಜಗೋಪಾಲ್ ಮಾತನಾಡಿ, ಪ್ರತಿನಿತ್ಯ ಬೆಳಗ್ಗೆ ಚಳಿ, ಮಳೆಯನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿದ್ದರು ಕೂಡ ತಾಲೂಕಿನಲ್ಲಿ ಪತ್ರಿಕಾ ವಿತರಕರಿಗೆ ಸರಿಯಾದ ರೀತಿಯಲ್ಲಿ ಆರೋಗ್ಯ ವಿಮೆ ಸೇರಿದಂತೆ ಸೇವಾ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಪತ್ರಿಕಾ ವಿತರಕರಿಗೂ ಕೂಡ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಂಗೂಪುರ ಶಿವಕುಮಾರ್, ಉಪಾಧ್ಯಕ್ಷ ಸೋಮಶೇಖರ್ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular