ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರಜ್ವಲ್ ಕುಮಾರ್ ಮಾಹಿತಿ
ಎಚ್.ಡಿ.ಕೋಟೆ:ಸಮಾಜಸೇವೆ ಮೂಲಕ ಸದ್ದಿಲ್ಲದೇ ಸುದ್ದಿ ಮಾಡಿದ, ಯುವಕರ ಕಣ್ಮಣಿ ಸ್ಯಾಂಡಲ್ ವುಡ್ ನ ಖ್ಯಾತ ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರ ಹೆಸರಿನಲ್ಲಿ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ.
ನಟ ದಿ.ಡಾ.ಪುನೀತ್ ರಾಜಕುಮಾರ್ ಹೃದಯ ಸ್ಥಂಬನದಿಂದ ನಿಧನ ಹೊಂದಿದ್ದರು. ಇದರಿಂದ ಇಡೀ ರಾಜ್ಯ ಸೇರಿದಂತೆ ದೇಶದಾದ್ಯಂತ ಸಾವಿನ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.
ಕರ್ನಾಟಕ ಸರ್ಕಾರದ ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಹೃದಯಘಾತ ದಿಂದಾಗುವ ಸಾವು ನೋವಿನ ಪ್ರಮಾಣವನ್ನು ತೆಲಡೆಗಟ್ಟಲು ಮುಂದಾಗಿದೆ.
ವ್ಯಕ್ತಿಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ನಂತರ ಇಸಿಜಿ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರು ಸುಮಾರು 36 ಸಾವಿರದಿಂದ 40 ಸಾವಿರ ವೆಚ್ಚದ ಒಂದು ಚುಚ್ಚುಮದ್ದನು ನೀಡಲಿದ್ದಾರೆ.

ಈ ಚುಚ್ಚುಮದ್ದು ಪಡೆದ 120 ನಿಮಿಷ (2 ಗಂಟೆ) ಗಳವರೆಗೆ ಹೃದಯಾಘಾತವಾಗುವುದನ್ನು ತಡೆಗಟ್ಟುತ್ತದೆ. ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಹೃದಯ ಆಸ್ಪತ್ರೆಗೆ ರೋಗಿಯು ದಾಖಲಾಗಿ ಹೆಚ್ಚಿನ ಪರೀಕ್ಷೆ ಪಡೆಯುವ ಮೂಲಕ ಇನ್ನಷ್ಟು ಹೆಚ್ಚಿನ ಚಿಕಿತ್ಸೆ ಪಡೆಯಬಹುದು ಎಂದು ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರಜ್ವಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಉಚಿತ ಚುಚ್ಚುಮದ್ದು : ಈ ಯೋಜನೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸ ಲಾಗಿದ್ದು, ಖಾಸಗೀ ಆಸ್ಪತ್ರೆ ಸೇರಿದಂತೆ ಬೇರೆ ಎಲ್ಲಿಯೂ ಉಚಿತವಾಗಿ ಲಭ್ಯವಿರುವುದಿಲ್ಲ. ಹೆಚ್.ಡಿ.ಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಯೋಜನೆಯಲ್ಲಿ ಕಳೆದ ಒಂದು ತಿಂಗಳಿನಿಂದ 3 ಚುಚ್ಚು ಮದ್ದುಗಳನ್ನು ನೀಡಲಾಗಿದೆ. ದಯಾಘಾತಕ್ಕೊಳಗಾದ ವ್ಯಕ್ತಿಗಳು ಪ್ರಾಥಮಿಕವಾಗಿ ಈ ಚುಚ್ಚುಮದ್ದು ಪಡೆದು ಹಾಗೂ ಹೆಚ್ಚಿನ ಚಿಕಿತ್ಸೆಯ ನಂತರ ಯಾವುದೇ ತೊಂದರೆಯಿಲ್ಲದೆ ನಿಶ್ಚಿಂತೆಯಿಂದಿದ್ದಾರೆ.
ಎದೆ ನೋವಿನ ಕಾರಣದಿಂದ ಶುಕ್ರವಾರ ಸಂಜೆ ಆಸ್ಪತ್ರೆಗೆ ಹೊರರೋಗಿ ವಿಭಾಗದಲ್ಲಿ ದಾಖಲಾದಾಗ ಇಸಿಜಿ ಮೂಲಕ ಹೃದಯಾಘಾತವಾಗಿರುವುದನ್ನು ದೃಢಪಡಿಸಿದ ವೈದ್ಯರು ಡಾ.ಪುನೀತ್ ರಾಜಕುಮಾರ್ ಯೋಜನೆಯ ಚುಚ್ಚುಮದ್ದು ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜಯದೇವ ಆಸ್ಪತ್ರೆಗೆ ಕಳುಹಿಸಿದರು. ಪ್ರಸ್ತುತ ಯಾವುದೇ ತೊಂದರೆಯಿಲ್ಲ.
–ರಾಜೀವ್, ಆಟೋ ಚಾಲಕ