ಹೊಸೂರು: ಸಾಲಿಗ್ರಾಮ ತಾಲೂಕಿನ ಹೊಸೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಮಂಡಳಿಯ ನೂತನ ಉಪಾಧ್ಯಕ್ಷರಾಗಿ ಎಚ್.ಎಸ್.ಶ್ರೀನಿವಾಸ್ ನೇಮಕಗೊಂಡಿದ್ದಾರೆ
ಶಾಸಕ ಡಿ.ರವಿಶಂಕರ್ ಅವರ ಶಿಪಾರಸ್ಸಿನ ಮೇರೆಗೆ ಎಚ್.ಎಸ್.ಶ್ರೀನಿವಾಸ್ ಅವರನ್ನು ನೇಮಿಸಲಾಗಿದ್ದು, ಗುರುವಾರ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು.
ನಂತರ ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ್, ಕಾಲೇಜಿನ ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸಿ ಮತ್ತು ಉತ್ತಮ ಗುಣಮುಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡಿಸಲು ಉಪನ್ಯಾಸಕರಿಂದ ಡಿ.ರವಿಶಂಕರ್ ಅವರ ಸಲಹೆ ಸಹಕಾರ ದೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್.ರಾಜೇಗೌಡ,ಕಾಂಗ್ರೇಸ್ ಮುಖಂಡ ಡೈರಿ ಮಾದು, ಹಳಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಎಚ್.ಆರ್.ದಿನೇಶ್, ಮಾಜಿ ಉಪಾಧ್ಯಕ್ಷ ಬಡ್ಡೆಮಂಜುನಾಥ್, ಮಾಜಿ ಸದಸ್ಯರಾದ ಅಜಯ್ ಬೀರು, ಎಚ್.ಜೆ.ರಮೇಶ್, ಡೈರಿ ಮಾಜಿ ಅಧ್ಯಕ್ಷರಾದ ಎಚ್.ಆರ್.ಪರುಶುರಾಮ್, ಎಚ್.ಎಸ್.ರವಿ. ಮುಖಂಡರಾದ ಆನಂತ್ ಕೋಟೆ,ಮೀನ್ ರಂಗಸ್ವಾಮಿ, ಗಾರೆದೀಪು, ಐ.ಪಿ.ವೆಂಕಟೇಶ್, ಕಾಲೇಜಿನ ಪ್ರಾಂಶುಪಾಲರಾದ ಜಿ.ಪಿ.ಸುಶೀಲಮ್ಮ, ಉಪನ್ಯಾಸಕರಾದ ಉಮಾಶಂಕರ್, ಮಂಜು, ದಿಲೀಪ್, ಮಂಜುಳಾ, ಸಂಧ್ಯಾ ಇದ್ದರು.
