ರಾಯಚೂರು: ರಾಯಚೂರಿನ ಮಂತ್ರಾಲಯದಲ್ಲಿ ದುರ್ಘಟನೆ ಸಂಭವಿಸಿದ್ದು, ಸ್ನಾನಕ್ಕೆಂದು ತುಂಗಭದ್ರಾ ನದಿಗೆ ಹೋಗಿದ್ದ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಅಜಿತ್ (19), ಸಚಿನ್ (20) ಮತ್ತು ಪ್ರಮೋದ್ (20) ನಾಪತ್ತೆಯಾದವರು. ಹಾಸನ ಜಿಲ್ಲೆಯ ಜಾವಗಲ್ ಗ್ರಾಮದವರಾಗಿರುವ ಇವರು ಡಿಗ್ರಿ ವಿದ್ಯಾರ್ಥಿಗಳು. ಶನಿವಾರ ಮಂತ್ರಾಲಯಕ್ಕೆ ಬಂದ ತಂಡದ ಭಾಗವಾಗಿದ್ದರು.
ಸಂಜೆಯ ವೇಳೆ ನದಿಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ. ನದಿಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾರಿ ಪ್ರವಾಹದಿಂದ ಕಾರ್ಯಾಚರಣೆ ಕಷ್ಟವಾಗಿದ್ದು, ಮಠದ ಸಿಬ್ಬಂದಿ ಮತ್ತು ಪೊಲೀಸರು ಮತ್ತೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಮಠದ ಆಡಳಿತ ಮಂಡಳಿಯೂ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದೆ.