ಮಂಗಳೂರು: ಸರ್ಕಾರದ ಶಕ್ತಿ ಯೋಜನೆಯನ್ನು ಬಳಸಿ ಹುಬ್ಬಳ್ಳಿಯಿಂದ ಪುತ್ತೂರಿಗೆ ಉಚಿತ ಬಸ್ ಮೂಲಕ ಮೂಲಕ ಬಂದ ವಿವಾಹಿತ ಮಹಿಳೆ ಪ್ರಿಯಕರನ ಜೊತೆ ಪರಾರಿಯಾದ ಘಟನೆ ನಡೆದಿದೆ. ಹನ್ನೊಂದು ತಿಂಗಳ ಮಗು ಹೊಂದಿರುವ ಹುಬ್ಬಳ್ಳಿ ಮೂಲದ ಮಹಿಳೆ ತನ್ನ ಗಂಡನಿಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತೇನೆಂದು ಮನೆಯಿಂದ ಹೊರಟಿದ್ದಾಳೆ. ಬಳಿಕ ಆಧಾರ್ ಕಾರ್ಡ್ ಬಳಸಿ ಉಚಿತ ಬಸ್ ಮೂಲಕ ಹುಬ್ಬಳ್ಳಿಯಿಂದ ಪುತ್ತೂರಿಗೆ ಆಗಮಿಸಿದ್ದಾಳೆ ಎನ್ನಲಾಗಿದೆ.
ಪುತ್ತೂರಿನ ಕೋಡಿಂಬಾಡಿ ಸಮೀಪದಲ್ಲಿ ತೋಟದ ಕೆಲಸ ಮಾಡುತ್ತಿದ್ದ ಪ್ರಿಯಕರನನ್ನು ನೋಡಲು ಮಹಿಳೆ ಪುತ್ತೂರಿಗೆ ಆಗಮಿಸಿದ್ದಾಳೆ. ಮಹಿಳೆ ಮದುವೆಗೆ ಮುನ್ನ ಯುವಕನ ಜೊತೆ ಪ್ರೀತಿಗೆ ಬೀಳಿದ್ದಳು. ಮದುವೆ ಆದ ಬಳಿಕವೂ ತನ್ನ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಳು. ಈ ಸಲುಗೆಯಿಂದ ಹಣ ಇಲ್ಲದಿದ್ದರೂ ಉಚಿತ ಬಳಸಿ ಪ್ರಿಯಕರನನ್ನು ಹುಡುಕಿ ಬಂದಿದ್ದಾಳೆ ಎನ್ನಲಾಗಿದೆ.
ಮಹಿಳೆ ಪುತ್ತೂರಿಗೆ ಬಂದಿರೋದು ತಿಳಿದು ಹುಬ್ಬಳ್ಳಿಯಿಂದ ಪುತ್ತೂರಿಗೆ ಗಂಡನ ಮನೆಯವರು ಹಾಗೂ ಮಹಿಳೆಯ ಮನೆಯವರು ಆಗಮಿಸಿ, ರಾತ್ರೋ ರಾತ್ರಿ ಪುತ್ತೂರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಕಂಗಾಲಾದ ಕುಟುಂಬಸ್ಥರಿಗೆ ಗ್ರಾಮ ಪಂಚಾಯತ್ ಸದಸ್ಯ ಜಯ ಪ್ರಕಾಶ್ ಬದಿನಾರ್ ಇಬ್ಬರನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ. ಪುತ್ತೂರಿಗೆ ಬಂದು ಪ್ರಿಯಕರನ ಜೊತೆ ಪರಾರಿಯಾದ ಮಹಿಳೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಯಪ್ರಕಾಶ್, ಪೊಲೀಸರಿಗೆ ದೂರು ನೀಡಿ ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಇಬ್ಬರೂ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಮಾಹಿತಿ ಲಭ್ಯವಾಗಿದೆ.