ವರದಿ: ಎಡತೊರೆ ಮಹೇಶ್
ಹೆಚ್.ಡಿ. ಕೋಟೆ: ಹಾಟಿವಿರ್ಟ್ ಸಂಸ್ಥೆಯು ಹೆಚ್.ಡಿ. ಕೋಟೆ ತಾಲ್ಲೂಕಿನ ಸಾಮಾನ್ಯ ಜನರ ಆರೋಗ್ಯ ವೃದ್ಧಿಸುವ ಹಾಗೂ ಖಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಕಂಡು ಹಿಡಿದು, ಅವರುಗಳನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸುವ ಮೂಲಕ ಮುಂದೆ ಆ ಖಾಯಿಲೆಗಳು ಉಲ್ಬಣಗೊಳ್ಳುವ ಮುಂಚೆ ಅಥವಾ ಮೂರು ಮತ್ತು ನಾಲ್ಕನೇ ಹಂತಕ್ಕೆ ತಲುಪುವುದನ್ನು ತಡೆಗಟ್ಟುವ ಉದ್ದೇಶದಿಂದ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 11.11.2025ರ ಮಂಗಳವಾರ ಬೆಳಗ್ಗೆ 10:00ಗಂಟೆಯಿಂದ ಮಧ್ಯಾಹ್ನ 1:00ಗಂಟೆ ವರೆಗೆ ಹೆಚ್.ಡಿ. ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವನ್ನು ಹೆಚ್.ಡಿ. ಕೋಟೆ ತಾಲ್ಲೂಕಿನ ಮಾನ್ಯ ಶಾಸಕರಾರ ಶ್ರೀ ಅನಿಲ್ ಚಿಕ್ಕಮಾಧುರವರು ಉದ್ಘಾಟಿಸಲಿದ್ದು, ತಾಲ್ಲೂಕು ದಂಧಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ತಾಲ್ಲೂಕು ಪಂಚಾಯಿತ್ತಿ ಕಾರ್ಯನಿರ್ವಹಕರು ಹಾಗೂ ಇತರೇ ಗಣ್ಯರು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಹೃದಯಕ್ಕೆ ಸಂಬಂಧಿಸಿದ ತಪಾಸಣೆ, ಕ್ಯಾನ್ಸರ್ ಸಂಬಂಧಿಸಿದ ತಪಾಸಣೆ, ಶ್ವಾಸಕೋಶ, ದಂತ ತಪಾಸಣೆ, ಶ್ರವಣ ದೋಷ, ಸ್ತ್ರೀ-ರೋಗ ತಪಾಸಣೆ, ಕಣ್ಣಿನ ತಪಾಸಣೆ, ಪೈಲ್ಸ್ ಸಂಬಂಧಿತ ತಪಾಸಣೆ, ನರರೋಗ ತಪಾಸಣೆ ಹಾಗೂ ಇನ್ನಿತರೆ ಸಾಮಾನ್ಯ ರೋಗಗಳ ತಪಾಸಣೆ ಮತ್ತು ಸಲಹೆಗಳನ್ನು ನೀಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಬಿರದಲ್ಲಿ ಸಿಗುವ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8970901102, 9353630903 ಸಂಪರ್ಕಿಸಬಹುದಾಗಿದೆ.



