ಹುಣಸೂರು: ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ವತಿಯಿಂದ ಹುಣಸೂರಿನ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಕುಮಾರ್ ಅರಸೇಗೌಡ ರವರಿಗೆ “ಪೋಷಕ ಕಲಾರತ್ನ” ಪ್ರಶಸ್ತಿಯನ್ನು ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಪ್ರದಾನ ಮಾಡಿ ಗೌರವಿಸಿದರು.
ಚಿತ್ರದಲ್ಲಿ ಸಮಾಜ ಸೇವಕ ಲಗ್ಗೆರೆ ನಾರಾಯಣಸ್ವಾಮಿ, ಸಂಘದ ಕಾರ್ಯದರ್ಶಿ ಎಂ ನವನೀತಂ, ಮಾಜಿ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಇದ್ದರು.