ಮೈಸೂರು : ಜಿಲ್ಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಇದೀಗ ನಿನ್ನೆ (ಜ.14) ರಾತ್ರಿ ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳ್ಳತನ ಆಗಿದೆ. ಸರಗೂರು ತಾಲೂಕಿನ ತೊರವಳ್ಳಿ ಗ್ರಾಮದಲ್ಲಿರುವ ಈ ದೇವಾಲಯದಲ್ಲಿದ್ದ ಹುಂಡಿ ಹಣ, ಬೆಳ್ಳಿ ವಿಗ್ರಹಗಳು, ಕಂಚಿನ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಬೆಳಗ್ಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಇತ್ತೀಚಿಗೆ ಮೈಸೂರು ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಕಳ್ಳರು, ದರೋಡೆಕೋರರ ಕಾಟಕ್ಕೆ ಮೈಸೂರಿನ ಜನ ಬೆಚ್ಚಿ ಬಿದ್ದಿದ್ದರೆ. ಇದೀಗ ಈ ಪ್ರಕಣಕ್ಕೆ ಸಂಬಂಧಿಸಿದಂತೆ ಸರಗೂರು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



