Saturday, April 19, 2025
Google search engine

Homeರಾಜ್ಯಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

ಹುಣಸೂರು: ನಾಗರಹೊಳೆ ಉದ್ಯಾನದ ಅಂತರ ಸಂತೆ ವಲಯದಲ್ಲಿ 25 ರಿಂದ 30 ವರ್ಷದ ಕಾಡಾನೆ ಶವ ಪತ್ತೆಯಾಗಿದೆ.

ಅಂತರ ಸಂತೆ ವನ್ಯಜೀವಿ ವಲಯದ ತಾಕರ ಶಾಖೆಯ ಹೊಸಕೆರೆ ಗಸ್ತಿನ ಗೋಪಾಲದೇವರ ಗುಡಿ ಬೆಂಕಿ ರೇಖೆ ಬಳಿಯಲ್ಲಿ ಆನೆ ಶವ ಪತ್ತೆಯಾಗಿದ್ದು, ಗಸ್ತಿನಲ್ಲಿದ್ದ ಸಿಬ್ಬಂದಿಗಳು ಮಾಹಿತಿ ನೀಡಿದ ಮೇರೆಗೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಎ.ಸಿ.ಎಫ್. ರಂಗಸ್ವಾಮಿ, ಆರ್.ಎಫ್.ಓ. ಭರತ್ ಭೇಟಿ ನೀಡಿ ಪರಿಶೀಲಿಸಿದರು.

ಅಂತರಸಂತೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಸಮ್ನ ಮರಣೋತ್ತರ ಪರೀಕ್ಷೆ ಮಡೆಸಿದರು.

ಇದು ಸುಮಾರು 25 ರಿಂದ 30 ವರ್ಷ ಪ್ರಾಯದ ಗಂಡಾನೆಯಾಗಿದ್ದು, ಸಹಜವಾಗಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಆನೆಯ ಅಂತ್ಯ ಸಂಸ್ಕಾರ ನಡೆಸಲಾಯಿತೆಂದು ನಾಗರಹೊಳೆ ಹುಲಿ ಯೋಜನೆ ಮುಖ್ಯಸ್ಥ ಹರ್ಷ ಕುಮಾರ್ ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular