ಹುಣಸೂರು: ರಾಜ್ಯದಲ್ಲಿ ಪತ್ರಕರ್ತರಿಗೆ ಆರ್ಥಿಕ ಭದ್ರತೆ ಇಲ್ಲದೆ, ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ಶಾಸಕ ಜಿ.ಡಿ ಹರೀಶ್ ಗೌಡ ತಿಳಿಸಿದರು.
ಅವರು ಹುಣಸೂರು ತಾಲೂಕಿನ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಕರ್ತರಿಗೆ ಒಬ್ಬರಿಗೆ 22 ಲಕ್ಷದ ವಿಮೆ ಬಾಂಡ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪತ್ರಕರ್ತರಿಗೆ ಸಂಕಷ್ಟದ ಸಮಯದಲ್ಲಿ ಉಪಯೋಗಕ್ಕೆ ಬರಲಿ ಎಂದು ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ, ಪತ್ರಕರ್ತರಿಗೆ ವಿಮೆ ಮಾಡಿಸುವ ಪ್ರಯತ್ನ ಮಾಡಿದ್ದೇನೆ.ತಾಲೂಕಿನಲ್ಲಿ ಇರುವ 35 ಜನ ಪತ್ರಕರ್ತರಿಗೆ ವಿಮೆಯ ಹಣವನ್ನು ಭರಿಸಿದ್ದು ಮುಂದೆಯೂ ಸಹ ನನ್ನ ಅವಧಿಯವರೆಗೆ ನಾನೇ ವಿಮೆ ಹಣವನ್ನು ಭರಿಸುತ್ತೇನೆ. ಜೊತೆಗೆ ನಿಮ್ಮ ಜತೆ ನಿರಂತರ ಸಂಪರ್ಕದಲ್ಲಿದ್ದು, ನಿಮ್ಮ ಹಿತ ಕಾಯುವೆ ಎಂದು ಭರವಸೆ ನೀಡಿದರು.
ಪತ್ರಕರ್ತರ ಬಹುದಿನದ ಕನಸ್ಸಾದ ನಿವೇಶನವನ್ನು ಕೊಡಿಸುವದರ ಜತೆಗೆ, ಅದಕ್ಕೆ ಬೇಕಾದ ಅಗತ್ಯ ಆರ್ಥಿಕ ಸಹಾಯವನ್ನು ನಾನೇ ಭರಿಸುವ ಭರವಸೆಯ ಜತೆಗೆ ಪತ್ರಕರ್ತರಿಗೆ ಅಧ್ಯಯನ ಶಿಬಿರ ಮತ್ತು ಯುವ ಪತ್ರಕರ್ತರ ಕಲಿಕಗೆ ಕಾರ್ಯಗಾರ ಹಮ್ಮಿಕೊಂಡು ನಿಮ್ಮ ವೃತ್ತಿ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೋಗುವಂತೆ ಸಲಹೆ ನೀಡಿದರು.