ಸೌಲಭ್ಯ ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ
ಹುಣಸೂರು: ಇದೇ ಪ್ರಥಮ ಬಾರಿಗೆ ಹುಣಸೂರು ತಾಲೂಕು ಪತ್ರಕರ್ತರು ಮತ್ತು ಕುಟುಂಬ ವರ್ಗ ಪೇಪರ್ ಹಂಚುವ ಹುಡುಗರಿಗೆ ಹಾಗೂ ಆದಿವಾಸಿ ಜನತೆಗೆ ಕಣ್ಣಿನ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್ ತಿಳಿಸಿದ್ದಾರೆ.
ನಗರದ ತಾ.ಪಂ ಆವರಣದಲ್ಲಿರುವ ಪತ್ರಕರ್ತರ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ 77 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ತಾಲೂಕು ಪತ್ರಕರ್ತರ ಸಂಘ, ಹುಣಸೂರು ರೋಟರಿ ಕ್ಲಬ್, ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಕನ್ನಡಕ ಶಸ್ತ್ರಚಿಕಿತ್ಸೆಯಂತಹ ಸೌಲಭ್ಯಗಳನ್ನು ಒದಗಿಸಲಾಗುವುದು ಇದರ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜಸ್ವಾಮಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ, ಮುಖ್ಯ ಅಥಿತಿಗಳಾಗಿ , ತಾ.ಪಂ ಇಒ ಹೊಂಗಯ್ಯ, ರೋಟರಿ ಅಧ್ಯಕ್ಷ ಪ್ರಸನ್ನ ಕೆ.ಪಿ. ಶಿಬಿರದ ಆಯೋಜಕ ಸದೃಢ ಮಂಜುನಾಥ್, ಹೆಚ್.ಸಿ. ಕುಮಾರ್, ತಾ.ಪ.ಸಂ ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್, ರೊ.ಸಹಾಯಕ ಗೌರ್ನರ್ ಆನಂದ್ ಆರ್. ವಲಯ 6 ರ ಸೇನಾನಿ ಪಾಂಡುಕುಮಾರ್ ಪಿ. ಭಾವವಹಿಸಲಿದ್ದಾರೆ.