ಹುಣಸೂರು: ಪ್ರತಿನಿತ್ಯ ಸಮಾಜಮುಖಿಯಾಗಿ ಸಂವಿಧಾನದ ಐದನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಹುಣಸೂರು ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಇದೇ ಪ್ರಥಮ ಬಾರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಆವರಣದ ಪತ್ರಕರ್ತರ ಸಂಘದ ಆವರಣದಲ್ಲಿ ದಿನಾಂಕ ಅ.02 ರ ಸೋಮವಾರದಂದು ತಾಲೋಕಿನ ಗದ್ದಿಗೆ ಸೂರ್ಯ ಯಶೋಧ ಆಸ್ಪತ್ರೆ ಯ ಮುಖ್ಯಸ್ಥ ಡಾ.ಯೋಗೇಶ್ ಕೆ.ಎಸ್. ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಶಿಭಿರದ ಉದ್ಘಾಟನೆಯನ್ನು ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮಿಗಳು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಇ.ಒ ಬಿ.ಕೆ.ಮನು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಮಧುಮೇಹ, ಬಿಪಿ, ಇಸಿಜಿ, ಕಣ್ಣು ಮೂಳೆ, ಚರ್ಮ, ಇನ್ನಿತರೆ ಸಾಮಾನ್ಯ ರೋಗಗಳ ನುರಿತ ಐದು ಮಂದಿ ತಜ್ಞ ವೈದ್ಯರು ಏಳು ಮಂದಿ ಸ್ಟಾಪ್ ನರ್ಸ್ಗಳು ಸೇವೆ ನೀಡಲಿದ್ದಾರೆ. ಚಿಕಿತ್ಸೆ ಪಡೆಯುವ ಎಲ್ಲರಿಗೂ ಉಚಿತ ಮಾತ್ರೆ ಔಷಧವನ್ನು ಡಾ. ಕೆ.ಎಸ್ ಯೋಗೇಶ್ ನೀಡಲಿದ್ದಾರೆ.
ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಾಲೋಕಿನ ಪತ್ರಕರ್ತ ಸಹೋದ್ಯೋಗಿ ಮಿತ್ರರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಅದ್ಯಕ್ಷರು ಮನವಿ ಮಾಡಿದ್ದಾರೆ.