Friday, April 18, 2025
Google search engine

Homeರಾಜ್ಯಹುಣಸೂರು: ಉಚಿತ ಅರೋಗ್ಯ ತಪಾಸಣೆ, ಔಷಧಿ ವಿತರಣೆ ಶಿಬಿರ

ಹುಣಸೂರು: ಉಚಿತ ಅರೋಗ್ಯ ತಪಾಸಣೆ, ಔಷಧಿ ವಿತರಣೆ ಶಿಬಿರ

ಹುಣಸೂರು: ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಕೆಂಡಗಣ ಸ್ವಾಮಿ ಗದ್ದಿಗೆ ಗ್ರಾಮದ ಪ್ರಸಿದ್ಧ ಶ್ರೀ ಗದ್ದಿಗೆ ಸೂರ್ಯ ಯಶೋಧ ಆಸ್ಪತ್ರೆ ವತಿಯಿಂದ ತಾಲ್ಲೂಕಿನ ಪತ್ರಕರ್ತರಿಗೆ ಹಮ್ಮಿಕೊಂಡಿದ ಉಚಿತ ಅರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಶಿಬಿರವನ್ನು ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು,  ಸಮಾಜದ ಸ್ವಾಸ್ತ್ಯ ಕಾಯುವ ಪತ್ರಿಕಾ ರಂಗ ಹಾಗೂ ಪತ್ರಕರ್ತರು ಇವತ್ತಿನ ವ್ಯವಸ್ಥೆಯಲ್ಲಿ ಸಂಕಷ್ಟಕ್ಕೆ ಹಿಡಾಗಿರುವುದು ದುರಂತ. ಇಂದು ಪತ್ರಕರ್ತರು ಸಂಪೂರ್ಣ ಸ್ವಾತಂತ್ರರಾಗಿಲ್ಲ, ಅವರು ಕೆಲ ಪಟಭದ್ರ ಹಿತಶಕ್ತಿಗಳ ಗಾಳಕ್ಕೆ ಸಿಲುಕಿದ್ದಾರೆ, ಇದು ಪ್ರಸ್ತುತ ವ್ಯವಸ್ಥೆಗೆ ಮಾರಕ. ಇದನ್ನು ತೊಡೆಯುವ ನಿಟ್ಟಿನಲ್ಲಿ ಸಮಾಜದ ರಾಜಕೀಯ ವ್ಯವಸ್ಥೆ, ಅಧಿಕಾರಶಾಹಿ ಗಳು ತಮ್ಮ ನಿಲುವು ಬದಲಾಯಿಸಿಕೊಂಡಾಗ ಮಾತ್ರ ಸಮಾಜದ ಸುವ್ಯವಸ್ಥೆ ಸಾಧ್ಯ ಎಂದರು.

ಕೆಲ ಸತ್ಯಗಳನ್ನು ಬರೆಯಲು ಆಗದೆ, ಮುಚ್ಚಿಡಲು ಸಾಧ್ಯವಾಗದೆ ಸಂದ್ಗಿದ್ಗಸ್ಥಿತಿಯಲ್ಲಿ. ಬದುಕು ಪರಿ ಪತ್ರಕರ್ತರದು ಅದನ್ನು ಹೇಳುವಂತಿಲ್ಲ, ರವಣಿಗೆಯ ಮೂಲಕ ಹೊರಗೆ ಹಾಕುವಂತಿಲ್ಲ. ಸಮಾಜದಲ್ಲಿ ಎಲ್ಲರನ್ನು ಸಂಭಾಳಿಸಬೇಕು ಸತ್ಯ ಬರೆದಾಗ ಜರಿಯುವವರು ಇದ್ದಾರೆ. ಜಾರುವರು ಇದ್ದಾರೆ. ಪತ್ರಿಕೊಧ್ಯಮದಲ್ಲಿ ಒಟ್ಟಾರೆ ಬದುಕು, ಬವಣೆ ಕಠಿಣ ಸಂಕೋಲೆಯಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಣಧಿಕಾರಿ ಬಿ.ಕೆ.ಮನು ಯಾವಾಗಲೂ ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಇಂಥ ಅರೋಗ್ಯ ಶಿಬಿರ ಅನಿವಾರ್ಯ, ಇಂಥ ಆಲೋಚನೆ ಮಾಡಿದ ಪತ್ರಕರ್ತರ ಸಂಘದ ಹೆಚ್.ಆರ್. ಕೃಷ್ಣಕುಮಾರ್ ಹಾಗೂ ಇದಕ್ಕೆ ಸಹಕರಿಸಿದ ಶ್ರೀ ಗದ್ದಿಗೆ ಸೂರ್ಯ ಯಶೋಧ ಆಸ್ಪತ್ರೆ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಿದರು.

ಆಸ್ಪತ್ರೆ ಮುಖ್ಯಸ್ಥರಾದ ಡಾ. ಯೋಗೇಶ್ ಕೆ.ಎಸ್.ಮಾತನಾಡಿ ಸಮಾಜಮುಕಿಯಾಗಿ ಕೆಲಸ ಮಾಡುತ್ತಿರುವ  ತಾಲ್ಲೂಕಿನ ಪತ್ರಕರ್ತರಿಗೆ ಅರೋಗ್ಯ ಶಿಬಿರ ಮಾಡುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲೂ ನಾವು ಪತ್ರಕರ್ತರ ಸಂಘಕ್ಕೆ ಉಚಿತ  ಆರೋಗ್ಯ ಸೇವೆ ನೀಡುವುದಾಗಿ ಭರವಸೆ ನೀಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್. ಆರ್. ಕೃಷ್ಣ ಕುಮಾರ್ ಮಾತನಾಡಿ, ಪತ್ರಕರ್ತರ ರಕ್ಷಣೆಗೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸೂಕ್ತ ರೀತಿಯ ಭದ್ರತೆ ಇಲ್ಲದಿರುವುದು ದುರಂತ, ಆ ನಿಟ್ಟಿನಲ್ಲಿ ಪತ್ರಕರ್ತರ ಸಂಘಗಳು ಸ್ವಯಂ ಕಟ್ಟುಪಾಡುಗಳನ್ನು ಮಾಡಿಕೊಂಡು ಸ್ವಯಂ ಅಭಿವೃದಿ ಜೊತೆ ಇಂಥ ಅರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ನಮಗೆ ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಹಾಗೂ ಕುಟುಂಬದವರು ಶಿಬಿರದ ಸದುಪಯೋಗಪಡಿಸಿಕೊಂಡರು.

RELATED ARTICLES
- Advertisment -
Google search engine

Most Popular