ಹುಣಸೂರು: ಹುಣಸುರು ರೋಟರಿ ಕ್ಲಬ್ ಮತ್ತು ಹುಣಸೂರು ಆರೋಗ್ಯ ಇಲಾಖೆ ವತಿಯಿಂದ ಡೆಂಘೀ ಜ್ಚರ ಹರಡುವ ಕುರಿತು ಮನೆ, ಮನೆಗೆ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು
ನಂತರ ಮಾತನಾಡಿದ ರೋಟರಿ ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್, ಮಳೆಗಾಲವಾದ ಕಾರಣ ಮನೆಯ ಅಕ್ಕ ಪಕ್ಕ ತೊಟ್ಟಿ,ಬಕೆಟ್, ಎಳನೀರು ಬುಂಡೆ, ಕಲುಷಿತ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳು ಬಾರದಂತೆ ಜಾಗೃತಿ ವಹಿಸಿದರೆ, ಮಾತ್ರ ಡೆಂಘೀಯಂತ ಮಾರಕ ರೋಗಳು ಅತ್ತಿರ ಸುಳಿಯದಂತೆ ತಡೆಯಬಹುದು ಎಂದರು.
ಇತ್ತೀಚಿಗೆ ಅತಿಯಾದ ಮಳೆಯಿಂದ ತಾಲೂಕಿನಾದ್ಯಂತ ಡೆಂಘ್ಯೂ ಪ್ರಕರಣಗಳು ಜಾಸಿಯಾಗುತ್ತಿದ್ದು. ಮನೆಯ ಸುತ್ತ ಮುತ್ತ ಶುಚಿಯಾಗಿ ಇಟ್ಟುಕೊಳ್ಳದಿದ್ದರೆ. ಅನಾರೋಗ್ಯವನ್ನು ನಾವೇ ಮನೆಗೆ ಆಹ್ವಾನಿಸಿದಂತಾಗುತ್ತದೆ. ಆದ್ದರಿಂದ ನೆರೆಹೊರೆಯವರ ಸಹಕಾರದಿಂದ ಸ್ವಚ್ಚತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ಸಲಹೆಗಾರ ಹನುಮಂತು ಮಾತನಾಡಿ, ಇತ್ತೀಚಿಗೆ ಎಲ್ಲಡೆ ಡೆಂಘೀ, ಮಲೇರಿಯಾ, ಚಿಕನ್ ಕುನ್ಯದಂತ ಮಾರಕ ಕಾಯಲೆಗಳು, ಕೊಳೆತ ನೀರಿನಲ್ಲಿ ಕುಳಿತ ಸೊಳ್ಳೆಗಳು, ನಮ್ಮನ್ನು ಕಚ್ಚಿದಾಗ ಜ್ವರದಿಂದ ಶುರುವಾಗಿ. ನಮ್ಮನ್ನ ಮರಣದವರೆಗೆ ಕೊಂಡ್ಯೊಯ್ಯಲು ಜವರಾಯನಾಗಿ ಬರುತ್ತದೆ. ಅದಕ್ಕಾಗಿ ಶುಚಿತ್ವವನ್ನು ಕಾಪಾಡಿ ಎಂದರು.
ಕಾರ್ಯಕ್ರಮದಲ್ಲಿ ಹುಣಸೂರು ರೋಟರಿ ಕ್ಲಬ್‌ನ ವಲಯ 6ರ ಸೇನಾನಿ ಪಾಂಡುಕುಮಾರ್ .ಪಿ. ಕಾರ್ಯದರ್ಶಿ ಹೆಚ್.ಆರ್.ಕೃಷ್ಣ ಕುಮಾರ್, ರೊ.ಶ್ಯಾಮ್, ಹಿರಿಯ ಆರೋಗ್ಯ ಸಲಹೆಗಾರರು, ಆರೋಗ್ಯ ಹಿರಿಯ ಸಹಾಯಕಿ ಅನಂತಿ, ಹಿರಿಯ ಆರೋಗ್ಯ ಸಹಾಯಕ ಸಿದ್ದೇಗೌಡ, ಸಹಾಯಕಿ ಆಶಾರಾಣಿ, ರಾಜೇಶ್ವರಿ, ಲಕ್ಷ್ಮಿ, ಕುಮಾರ್ ಹೆಚ್.ಎನ್.ಪ್ರಭಾಕರ್, ಚಾಲಕ ನಾಗೇಶ್ ಇದ್ದರು