ಹುಣಸೂರು: ಸೂರ್ಯ ಹೇಗೆ ವಿಶ್ವಕ್ಕೆ ಬೆಳಕು ನೀಡುತ್ತದೆ ಹಾಗೆ ನಾವು ಕೂಡ ಸಮಾಜದ ನೋವಿಗೆ ದೀಪದಂತೆ ನೆರವಾಗಬೇಕು ಎಂದು ಮೈಸೂರು ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಸೌಮ್ಯ ದಿನೇಶ್ ಸಲಹೆ ನೀಡಿದರು. ನಗರದ ರೋಟರಿ ಭವನದಲ್ಲಿ ನಡೆದ ಇನ್ನರ್ ವೀಲ್ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ಮಿತ ದಯಾನಂದ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು ಯಾವುದೇ ಸಂಸ್ಥೆ ಇರಲಿ ಉತ್ತಮ ಕೆಲಸ ಮಾಡಬೇಕಾದರೆ ಶಿಸ್ತು, ಶ್ರದ್ದೆ ಭಕ್ತಿ ಇದ್ದರೆ ಸಾಧನೆ ಅಸಾಧ್ಯವಲ್ಲವೆಂದ ಅವರು ನಮ್ಮ ಮೈಸೂರು ಸಂಟ್ರಲ್ನಲ್ಲಿ 754 ಪ್ರಾಜೆಕ್ಟ್ ಮಾಡಿ ಮಾದರಿಯಾಗಿದ್ದು ಆ ನಿಟ್ಟಿನಲ್ಲಿ ನೀವು ಕೂಡ ಸಮಾಜದ ಆರೋಗ್ಯ, ಶಿಕ್ಷಣ, ಮತ್ತು ಪರಿಸರಕ್ಕೆ ಆದ್ಯತೆ ನೀಡುವ ಮುಖ್ಯೇನಾ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕೈಜೋಡಿಸಿ ಉತ್ತಮ ಕೆಲಸ ಮಾಡಿ ಎಂದರು. ಇನ್ನರ್ ವೀಲ್ಗೆ 100 ರ ಸಂಭ್ರಮವಾಗಿದ್ದು, ಸರಕಾರದ ಕಣ್ಣಿಗೆ ಕಾಣದೆ, ಸೌಲಭ್ಯ ವಂಚಿತರಾಗಿರುವ ಫಲಾನುಭವಿಗಳನ್ನು ಗುರುತುಸಿ ಸೇವೆ ಮಾಡುವ ಮೂಲಕ ಸಂಸ್ಥೆಗೆ ಮೆರಗು ತರಬೇಕು ಎಂದು ಕಿವಿ ಮಾತು ಹೇಳಿದರು.
ನೂತನ ಇನ್ನರ್ ವೀಲ್ ಅಧ್ಯಕ್ಷೆ ಸ್ಮಿತ ದಯಾನಂದ್ ಮಾತನಾಡಿ ಈ ವರ್ಷದ ದ್ಯೇಯ ಮತ್ತು ಶೈನ್ ಎ ಲೈಟ್ ಎಂಬ ವಾಕ್ಯದ ಅನುಗುಣವಾಗಿ, ಸಮಾಜದಲ್ಲಿ ತಮ್ಮ ಕೈಲಾದ ಅಳಿಲು ಸೇವೆ ಮಾಡಲು ಅವಕಾಶ ನೀಡಿ ನನ್ನೊಂದಿಗೆ ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಇನ್ನರ್ ವೀಲ್ ಪದಗ್ರಹಣ ಕಾರ್ಯಮದಲ್ಲಿ ಕಾರ್ಯದರ್ಶಿ ಜಯಲಕ್ಷ್ಮಿ ,ಮಾಜಿ ಅಧ್ಯಕ್ಷೆ ಡಾ.ರಾಜೇಶ್ವರಿ, ಮಾಜಿ ಕಾರ್ಯದರ್ಶಿ ತೇನ್ ಮೌಜಿ, ಡಾ.ಮಂಜುಳ, ಅಂಜು ಭವಾನಿ, ರೋಟರಿ ಕಾರ್ಯದರ್ಶಿ ಡಾ.ಕೆ.ಪಿ.ಪ್ರಸನ್ನ ಇದ್ದರು.