ಹುಣಸೂರು: ಮೈಸೂರು ಡಿಸ್ಟಿಕ್ 318 ರ ಜಿಲ್ಲಾಧ್ಯಕ್ಷರಾದ ವೈಶಾಲಿ ಕೊಡುವ ರವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಪೂರ್ಣ ಚಂದ್ರ ಸ್ಕೂಲ್ ಗೆ ಇನ್ನರ್ವಿಲ್ ಕ್ಲಬ್ ಹುಣಸೂರು ರವರು “ಸಾರ್ಥಕ ಸೂರು” ಎಂಬ ಶೀರ್ಷಿಕೆ ಯಡಿ ಹಾಕಿಸಿರುವ ಸ್ಕೂಲ್ ಚಾವಣಿಯ ಉದ್ಘಾಟನೆಯನ್ನು ನಡೆಸಿಕೊಟ್ಟು, ಇನ್ನರ್ ವಿಲ್ ಕ್ಲಬ್ ಹುಣಸೂರು ಇವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಇನ್ನರ್ ವಿಲ್ ಕ್ಲಬ್ ಹುಣಸೂರು ಇವರು ಹೊಲಿಗೆ ಯಂತ್ರವನ್ನು ಮಾತೃಶ್ರೀ ಶಾಲೆಗೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಸ್ಮಿತಾ ದಯಾನಂದ್, ಕಾರ್ಯದರ್ಶಿ ಜ್ಯೋತಿ ವಿಶ್ವನಾಥ್, ಡಾ. ಸರೋಜಿನಿ ವಿಕ್ರಂ, ಜಿಲ್ಲಾ ಖಜಾಂಚಿ ಉಮಾ ಮಹೇಶ್, ತೆನ್ಮೋಳಿ ಜಯಲಕ್ಷ್ಮಿ ಇತರರು ಹಾಜರಿದ್ದರು.