ಹುಣಸೂರು: ಚಿರತೆ ದಾಳಿ ನಡೆಸಿ ಯುವಕನೊರ್ವನನ್ನು ಗಾಯಗೊಳಿಸಿರುವ ಘಟನೆ ತಾಲೂಕಿನ ರಾಮೇನಹಳ್ಳಿ ಬೆಟ್ಟದ ತಪ್ಪಲಿನನಲ್ಲಿ ನಡೆದಿದೆ.
ಹುಣಸೂರು ನಗರಕ್ಕೆ ಸಮೀಪದ ಹನಗೋಡು ರಸ್ತೆಯ ರಾಮೇನಹಳ್ಳಿ ಬೆಟ್ಟದ ತಪ್ಪಲಿನ ಜಾತ್ರೆ ಮಾಳದ ಮಂಟಪದ ಬಳಿ ಸ್ನೇಹಿತರೊಂದಿಗೆ ಕುಳಿತಿದ್ದ ವೇಳೆ ಬೆಟ್ಟದ ಕಡೆಯಿಂದ ಬಂದ ಚಿರತೆ ದಾಳಿ ನಡೆಸಿದ್ದು, ಮಂಡಿ ಹಾಗೂ ಭುಜಕ್ಕೆ ಪೆಟ್ಟಾಗಿದ್ದು, ವಿಷಯ ತಿಳಿದ ಗ್ರಾಮಸ್ಥರು ತಕ್ಷಣವೇ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.