Wednesday, April 9, 2025
Google search engine

Homeರಾಜ್ಯಸುದ್ದಿಜಾಲಹುಣಸೂರು: ದಂಪತಿಗಳ ಮೇಲೆ ಚಿರತೆ ದಾಳಿ 

ಹುಣಸೂರು: ದಂಪತಿಗಳ ಮೇಲೆ ಚಿರತೆ ದಾಳಿ 

ಹುಣಸೂರು:ಬೈಕಿನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಬೈಕಿನಿಂದ ಬಿದ್ದ ಮಹಿಳೆಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಣಸೂರು ತಾಲೂಕಿನ ಗೊಮ್ಮಟಗಿರಿ ಬೆಟ್ಟದ ರಸ್ತೆಯಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಹಳೆ ಬೀಡು ಗ್ರಾಮದ ಶಿವಕುಮಾರ್ ಪತ್ನಿ ಸವಿತಾ ಗಾಯಗೊಂಡವರು.

ಮೇಗಳಾಪುರದಿಂದ ರಟ್ನಳ್ಳಿ ಮಾರ್ಗವಾಗಿ ಸ್ವಗ್ರಾಮ ಹಳೇಬೀಡು ಗ್ರಾಮಕ್ಕೆ ಶಿವಕುಮಾರ್ ತಮ್ಮ ಬೈಕಿನಲ್ಲಿ ಪತ್ನಿ ಸವಿತಾ ಹಾಗೂ ಮಗಳೊಂದಿಗೆ ಗುರುವಾರ ರಾತ್ರಿ ತೆರಳುತ್ತಿದ್ದ ವೇಳೆ ಗೊಮ್ಮಟಗಿರಿ ಬಳಿಯ ತಿರುವಿನಲ್ಲಿ ಚಿರತೆ ಹಟಾತ್ ದಾಳಿ ನಡೆಸಿದೆ.

ಸವಾರನ ನಿಯಂತ್ರಣ ತಪ್ಪಿದ ಬೈಕ್ ಸಹಿತ ಮೂವರು ಕೆಳಗೆ ಬಿದ್ದ ರಭಸಕ್ಕೆ ಸವಿತಾ ಗಾಯಗೊಂಡಿದ್ದಾರೆ. ದಾರಿ ಹೋಕರು ಬಿಳಿಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಧಾವಿಸಿದ್ದಾರೆ.

RELATED ARTICLES
- Advertisment -
Google search engine

Most Popular