Wednesday, July 1, 2026
Google search engine

Homeರಾಜ್ಯಸುದ್ದಿಜಾಲಹುಣಸೂರು ಶಾಸಕ ಜಿ.ಡಿ. ಹರೀಶ್‌ಗೌಡರ ಪತ್ನಿಗೆ ಅಶ್ಲೀಲ ಕಮೆಂಟ್‌: ದೂರು ದಾಖಲು

ಹುಣಸೂರು ಶಾಸಕ ಜಿ.ಡಿ. ಹರೀಶ್‌ಗೌಡರ ಪತ್ನಿಗೆ ಅಶ್ಲೀಲ ಕಮೆಂಟ್‌: ದೂರು ದಾಖಲು

ಮೈಸೂರು: ಹುಣಸೂರು ಶಾಸಕ ಜಿ.ಡಿ. ಹರೀಶ್‌ ಗೌಡ ಅವರ ಪತ್ನಿ ವರ್ಷ ಹರೀಶ್‌ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್‌ ಹಾಕಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ.

ವರ್ಷ ಹರೀಶ್‌ ಗೌಡ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ dkgowda8456 ಹೆಸರಿನ ಅನಾಮಿಕ ಖಾತೆಯಿಂದ ಅಶ್ಲೀಲ ಕಮೆಂಟ್‌ ಮಾಡಲಾಗಿದೆ. ಇದರಿಂದ ವಿಚಲಿತರಾಗಿರುವ ವರ್ಷ ಹರೀಶ್‌ ಗೌಡ ಅವರು, ಅಶ್ಲೀಲ ಕಮೆಂಟ್‌ ಹಾಕಿ ಮಾನಸಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಆರೋಪಿಯನ್ನು ಪತ್ತೆ ಮಾಡಿ, ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವರ್ಷ ಹರೀಶ್‌ಗೌಡ ಅವರು ಸಾರ್ವಜನಿಕ ವಲಯದಲ್ಲಿ ಸಕ್ರಿಯವಾಗಿದ್ದು, ವರ್ಷ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳು ಹಾಗೂ ಕಷ್ಟ-ಸುಖಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದಾರೆ.
ವರ್ಷ ಅವರ ಜನಪರ ಕಾರ್ಯವೈಖರಿಯನ್ನು ಸಹಿಸದ ಕೆಲವರು ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್‌ ಮಾಡುತ್ತಿರುವ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ದೇಶದಲ್ಲಿ ನಮ್ಮ ಮಹಿಳೆಯರನ್ನು ಗೌರವ ದಿಂದ ಪೂಜಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆದರೆ ಈ ರೀತಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಾಣುವವರ ಮೇಲೆ ಕಾನೂನು ಕ್ರಮವಾಗ ಬೇಕೆಂಬುದು ಆಶಯ.ಇನ್ನೂ ಮುಂದೆ ಯಾವ ಮಹಿಳೆಯರ ಬಗ್ಗೆಯೂ ಮಾತನಾಡದೆ ಇರುವ ಬಗ್ಗೆ ಎಚ್ಚರಿಕೆಯಾಗಲಿ ಎಂದು ದೂರು ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular