ಹುಣಸೂರು: ಹುಣಸೂರು ಟಿಎಪಿಸಿಎಂಎಸ್ ವತಿಯಿಂದ 9 ನೂತನ ವಾಣಿಜ್ಯ ಮಳಿಗೆಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉಧ್ಘಾಟಿಸಿ ಆಡಳಿತ ಮಂಡಳಿಯವರೊಂದಿಗೆ ನಾಮಫಲಕ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ಈ ಹಿಂದೆ ಮೊದಲ ಹಂತದಲ್ಲಿ ೫೦ ಲಕ್ಷರೂ ವೆಚ್ಚದಡಿ ೯ ಮಳಿಗೆ ನಿರ್ಮಿಸಲಾಗಿತ್ತು. ಮತ್ತೆ ಇಂದು 50 ಲಕ್ಷರೂ ವೆಚ್ಚದ 9 ಮಳಿಗೆಗಳನ್ನು ಉದ್ಘಾಟಿಸಿದ್ದು, ಈ 18 ವಾಣಿಜ್ಯ ಮಳಿಗೆಗಳಿಂದ ಸಂಘಕ್ಕೆ ಹೆಚ್ಚಿನ ಆದಾಯ ಬರಲಿದೆ. ಶೀಘ್ರವಾಗಿ ರೈತಭವನ ನಿರ್ಮಿಸಲು ಎಲ್ಲಾ ರೀತಿಯ ಕ್ರಮವಹಿಸಲಾಗುವುದು ಎಂದು ಹೇಳಿ ಸಂಘದ ಪ್ರಗತಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಹೆಚ್.ಟಿ.ಬಾಬು ಮಾತನಾಡಿ, ಸರಕಾರದ ಯಾವುದೇ ಅನುದಾನವಿಲ್ಲದೆ ನಮ್ಮ ಟಿಎಪಿಸಿಎಂಎಸ್ ಹಾಗೂ ಜಿ.ಡಿ.ಹರೀಶಗೌಡರ ಸಹಕಾರದಿಂದ 1 ಕೋಟಿ. ರೂ ವೆಚ್ಚದಲ್ಲಿ 18 ಮಳಿಗೆಗಳನ್ನು ನಿರ್ಮಿಸಲಾಗಿದೆ. ನನ್ನ ಅವಧಿಯಲ್ಲಿ ಮಳಿಗೆಗಳು ಉದ್ಘಾಟನೆ ಗೊಂಡಿರುವುದಕ್ಕೆ ಸಂತೋಷವಾಗಿದೆ. ಶಾಸಕರ ಸಹಕಾರವನ್ನು ಎಂದು ಮರೆಯಲಾಗದು ಎಂದರು.
ಉಪಾಧ್ಯಕ್ಷ ರೇವಣ್ಣ, ನಿರ್ಧೇಶಕರಾದ, ಇಂದುಕಲಾ, ಸುಜಾತ, ಮಂಗಳಗೌರಿ, ನಾಗರಾಜು, ಕೆಂಪೇಗೌಡ, ವೆಂಕಟೇಶ್, ರಮೇಶ್, ಚಂದ್ರಶೇಖರ್, ಪ್ರೇಮಕುಮಾರ್, ಬಾಬು, ಕಾರ್ಯದರ್ಶಿ ಹೇಮಲತಾ ಸೇರಿದಂತೆ ಸಂಘದ ಸದಸ್ಯರು, ಮುಖಂಡರು ಭಾಗವಹಿಸಿದ್ದರು.