Friday, April 18, 2025
Google search engine

Homeಅಪರಾಧಹುಣಸೂರು ನಗರದಲ್ಲಿ ಜೋಡಿ ಕೊಲೆ: ವಾಚ್ ಮೆನ್, ಬುದ್ದಿ ಮಾಂದ್ಯ ವ್ಯಕ್ತಿ ಕೊಲೆ

ಹುಣಸೂರು ನಗರದಲ್ಲಿ ಜೋಡಿ ಕೊಲೆ: ವಾಚ್ ಮೆನ್, ಬುದ್ದಿ ಮಾಂದ್ಯ ವ್ಯಕ್ತಿ ಕೊಲೆ

ಹುಣಸೂರು: ನಗರದ ಬೋಟಿ ಬಜಾರ್ ರಸ್ತೆಯ ಪರಸಯ್ಯ ಛತ್ರ ಪಕ್ಕದ ಎಸ್.ಎಸ್ ಸಾಮಿಲ್ ಬಳಿ ಅಲ್ಲಿನ ವಾಚ್ ಮೆನ್ ಸೇರಿದಂತೆ ಮತ್ತೊಬ್ಬ ಬುದ್ದಿಮಂದ್ಯ ವ್ಯಕ್ತಿಯನ್ನು ತಲೆ ಮೇಲೆ ಬಾರದ ವಸ್ತು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜೂ. 21 ರ ಮಧ್ಯರಾತ್ರಿ ನಡೆದಿದೆ.

ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯ ವಾಚ್ ಮೆನ್ ವೆಂಕಟೇಶ್ (75) ಹಾಗೂ ಬುದ್ದಿಮಂದ್ಯ ವ್ಯಕ್ತಿ ಷಣ್ಮುಖ (65) ಹತ್ಯೆಯಾದವರು.

ವೆಂಕಟೇಶ್ ಇದೇ ಸಾಮಿಲ್ ನಲ್ಲಿ ಕೆಲಸ ಮಾಡುತ್ತಿದ್ದು, ಷಣ್ಮುಖರಿಗೆ ಯಾರು ಇಲ್ಲದಿರುವುದರಿಂದ ಸಣ್ಣ ಪುಟ್ಟ ಕೆಲಸ ಮಾಡುತ್ತ ಇದೆ ಮಿಲ್ ಬಳಿ ಮಲಗುತ್ತಿದರು ಎನ್ನಲಾಗಿದೆ.

ಯಾಕೆ ಈ ಹತ್ಯೆ ನಡೆದಿದೆ ಎಂಬುದಕ್ಕೆ ಇನ್ನೂ ನಿಖರ ಮಾಹಿತಿ ತಿಳಿದು ಬಂದಿಲ್ಲ. ಬೆಲೆ ಬಾಳುವ ಮರ ಕದಿಯಲು ಬಂದವರು ಹತ್ಯೆ ಮಾಡಿದರೋ, ಅಥವಾ ಬೇರೆ ಯಾವ ಕಾರಣಕ್ಕೆ ಎಂದು ಪೊಲೀಸರ ತನಿಖೆ ಬಳಿಕ ತಿಳಿಯಬೇಕಿದೆ.

ಬೋಟಿ ಬಜಾರ್ ನ ಮಿಸ್ಬಾ ಸಾಮಿಲ್ ನಲ್ಲಿ ಕೊಲೆ ನಡೆದಿದ್ದು, ಘಟನಾ ಸ್ಥಳಕ್ಕೆ ಶ್ವಾನ ದಳದೊಂದಿಗೆ ಎಸ್.ಪಿ. ಸೀಮಾ ಲಾಟ್ಕರ್, ಅಡಿಷನಲ್ ಎಸ್.ಪಿ. ನಂದಿನಿ, ಡಿವೈಎಸ್ ಪಿ ಮಹೇಶ್, ಇನ್ಸ್ ಪೆಕ್ಟರ್ ಧರ್ಮೇಂದ್ರ ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು.

ಪೊಲೀಸರು ಮಿಲ್ ನಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮರಾ ಫುಟೇಜ್ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular