ಹುಣಸೂರು ಡಿ.10: ಅವೇರೇ ವೋಯೇಜ್ ಕಂಪನಿ ಹಾಗೂ ರೋಟರಿ ಸಹೋಗದಲ್ಲಿ ಕಾರ್ಯಗಾರ ನಡೆಯಲಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಹಾಗೂ ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ತಿಳಿಸಿದ್ದಾರೆ.
ದಿನಾಂಕ 12-01-25 ಭಾನುವಾರ ನಗರದ ರೋಟರಿ ಭವನದಲ್ಲಿ ನಡೆಯುವ ಕಾರ್ಯಗಾರ (ಬಿಒಪಿ) ಕಾರ್ಯಕ್ರಮದ ವಿಷಯ ಮತ್ತು ಸಮಗ್ರ ಮಾಹಿತಿಯನ್ನು ಸವಿಸ್ತಾರವಾಗಿ ಅವೇರೆ ವೋಯೇಜ್ ಕಂಪನಿ ವ್ಯವಸ್ಥಾಪಕ ಶರತ್ ಕುಮಾರ್ ನೀಡಲಿದ್ದಾರೆ.
ಅಂದು ಬೆಳಿಗ್ಗೆ 10.00.ಕ್ಕೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಜಿ.ಡಿ.ಹರೀಶ್ ಗೌಡ ಉದ್ಘಾಟಿಸಲಿದ್ದಾರೆ. ಸಾನಿಧ್ಯವನ್ನು ಗಾವಡಗೆರೆ ಗುರುಲಿಂಗ ಮಠದ ಶ್ರೀ ನಟರಾಜ ಸ್ವಾಮಿವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪ್ರತಿನಿಧಿ ಪ್ರಧಾನ ಸಂಪಾದಕ ಸಿ.ವಿ.ಮಹೇಂದ್ರ ರವರು ಹಾಗೂ ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ. ಅಧ್ಯಕ್ಷತೆ ವಹಿಸಲಿದ್ದಾರೆ.
ಹಾಗೆ ಮೂರು ವರುಷಗಳಿಂದ ಕಂಪನಿಯಲ್ಲಿ ಸಾಧನೆಗೈದ ಶಶಿಕಲಾ ಬಸವಲಿಂಗಯ್ಯ, ಹೆಚ್.ಆರ್.ಕೃಷ್ಣಕುಮಾರ್, ಧರ್ಮಾಪುರ ನಾರಾಯಣ್ ಹಾಗೂ ಇನ್ನೂ ಹಲವಾರು ಅಚೀವ್ ಮಾಡಿರುವ ಸಾಧಕರನ್ನು ಇದೇ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.