ಹುಣಸೂರು: ಕಡೆ ಕಾರ್ತಿಕ ಮಾಸದ ಹಿನ್ನೆಲೆ ಕಿರಾತೇಶ್ವರನಿಗೆ ವಿಜೃಂಭಣೆಯಿಂದ ಪುಷ್ಪಾಲಂಕಾರ, ಪೂಜಾ ಕೈಂಕರ್ಯ ಕೈಗೊಳ್ಳಲಾಗಿತ್ತು.
ನಗರದ ರಂಗನಾಥ ಬಡಾವಣೆಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ಬಳಿ ಇರುವ ಅರಣ್ಯಕೇಶ್ವರನಿಗೆ ಈ ವರ್ಷದ ಕಳೆದ ಮೂರು ಕಾರ್ತಿಕ ಮಾಸದಲ್ಲೂ ಐದುನೂರಕ್ಕೂ ಹೆಚ್ಚು ದೀಪಗಳನ್ನು ಭಕ್ತರಿಂದಲೇ ಹಚ್ಚುವ ಮೂಲಕ ಭಕ್ತರಿಗೆ ಆದ್ಯತೆ ನೀಡಲಾಗಿತ್ತು.

ಸೋಮವಾರ ಸಂಜೆಯಿಂದಲೂ ಪ್ರಧಾನ ಅರ್ಚಕರಾದ ಮಹೇಶ್ ಭಟ್ ಅವರು ಕಿರಾತೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ , ಹಾಗೂ ದೀಪಾರಾಧನೆಯನ್ನು ಭಕ್ತ ಸಮೂಹದ ನಡುವೆ ನಡೆಸಲಾಯಿತು.
ದರ್ಶನಕ್ಕೆ ಬಂದ ನೂರಾರು ಭಕ್ತರಿಗೂ ಮೊಸರನ್ನ, ಅವಲಕ್ಕಿ, ವೆಜಿಟಬಲ್ ಬಾತ್, ಕಡ್ಲೆಪುರಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಕಲಾವತಿ ಬಸಪ್ಪ, ಕೆಚ್. ಎಚ್.ರಾಜು, ರಾಮು, ಪ್ರಸನ್ನ, ಹಾಗೂ ಸಿಂಚನ ಕೃಷ್ಣೇಗೌಡ, ಮಹದೇವ್ ಇದ್ದರು.