ಹುಣಸೂರು: ಹುಣಸೂರು ರೋಟರಿ ಕ್ಲಬ್ 2024-25ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ಜುಲೈ 9ರ ಮಂಗಳವಾರ ಸಂಜೆ 6.30 ನಡೆಯಲಿದೆ ಎಂದು ರೊ.ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪದಗ್ರಹಣ ಕಾರ್ಯಕ್ರಮ ಮತ್ತು ಅಧ್ಯಕ್ಷತೆಯನ್ನು ಎಂಪಿಎಚ್ಎಫ್ ರೊ.ಶೇಖರಶೆಟ್ಟಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ, ಡಾ.ಪ್ರಸನ್ನ ಕೆ.ಪಿ. ಮೂರು ಕ್ಲಬ್ಬಿನ ಸಹಾಯಕ ಗೌರ್ನಾರ್ ಆರ್. ಆನಂದ್, ವಲಯ 6 ರ ಸೇನಾನಿ ಪಾಂಡುಕುಮಾರ್ .ಪಿ. ನಿಕಟ ಪೂರ್ವ ಅಧ್ಯಕ್ಷ ಚನ್ನಕೇಶವ, ಡಾ. ಬಸವರಾಜ್ ವೇದಿಕೆಯನ್ನೇರಲಿದ್ದಾರೆ.