ಹುಣಸೂರು: ಹುಣಸೂರು ರೋಟರಿ ಕ್ಲಬ್ 2024-25 ಸಾಲಿಗೆ ನಗರದ ಮಹಿಳಾ ಕಾಲೇಜಿನ ಪ್ರೊಫೆಸರ್ ಡಾ ಕೆ.ಪಿ.ಪ್ರಸನ್ನ ಅಧ್ಯಕ್ಷರಾಗಿ, ಹಾಗೂ ಕಾರ್ಯದರ್ಶಿಯಾಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್ ಆಯ್ಕೆಯಾಗಿದ್ದಾರೆ.
ವಲಯ 6 ರ ಸೇನಾನಿಯಾಗಿ ಮೀನುಮನೆ ಪಾಂಡುಕುಮಾರ್ ಹಾಗೂ ಸಹಾಯಕ ಗವರ್ನರ್ ಆಗಿ ಆರ್.ಆನಂದ್ ಅವರನ್ನು ಹುಣಸೂರು, ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರದ ರೋಟರಿ ಕ್ಲಬ್ ಗಳಿಗೆ ನೇಮೀಸಲಾಗಿದೆ ಎಂದು ನಿಕಟಪೂರ್ವ ಅಧ್ಯಕ್ಷ ಚೆನ್ನಕೇಶವ.ಎಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.