Monday, April 21, 2025
Google search engine

Homeರಾಜಕೀಯಹುಣಸೂರು ಮತ್ತೊಂದು ಭಟ್ಕಳ ಆಗಲಿದೆ: ಪ್ರಮೋದ್ ಮುತಾಲಿಕ್

ಹುಣಸೂರು ಮತ್ತೊಂದು ಭಟ್ಕಳ ಆಗಲಿದೆ: ಪ್ರಮೋದ್ ಮುತಾಲಿಕ್

ಹುಣಸೂರು: ಜಿಹಾದಿ ಸಂಸ್ಕೃತಿ ಇರುವ ಕಡೆಗಳಲ್ಲಿ ಹಿಂದೂ ಯುವಕರ ಕೊಲೆ. ಆತ್ಮಹತ್ಯೆಗೆ ಪ್ರಚೋದನೆ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಸರಕಾರ ಮತ್ತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಎಚ್ಚರಿಸಿದರು.

ವಿರಾಜಪೇಟೆಯಿಂದ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ತಾಲೂಕಿನ ದಾಸನಪುರದ ರವಿ ಪುತ್ರ ಮುತ್ತುರಾಜ್ ಕೊಲೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಕುಟಂಬದವರಿಂದ ಮಾಹಿತಿ ಪಡೆದು ಧೈರ್ಯ ಹೇಳಿದ ನಂತರ ಅವರು ಪ್ರಕರಣ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು.

ನಂತರ ಮಾತನಾಡಿದ ಇದೊಂದು ಜಿಹಾದಿ ಮನಸ್ಥಿತಿಯುಳ್ಳವರಿಂದ ನಡೆದ ಕೃತ್ಯ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದಕ್ಕಾಗಿ ಹಿಂದೂ ಸಂಘಟನೆಗಳು ಬೆಂಬಲವಾಗಿ ನಿಲ್ಲಲಿವೆ. ಯಾವುದೇ ಕಾನೂನು ಹೋರಾಟಕ್ಕೂ ನೆರವು ನೀಡಲಾಗುವುದೆಂದು ಭರವಸೆ ಇತ್ತರು. ನಂತರ ನಗರದಲ್ಲಿ ಕೆಲ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದರು.

ಹುಣಸೂರಿನ ಮುತ್ತುರಾಜ್. ಕೆ.ಆರ್.ನಗರದ ಪುನಿತ್ ಸಾವು ಕೂಡ ಒಂದೇ ರೀತಿಯಲ್ಲಿ ನಡೆದಿದೆ. ಎರಡೂ ಕಡೆಯಲ್ಲಿ ಜಿಹಾದಿ ಸಂಸ್ಕೃತಿಯವರು ಮೊದಲು ಹಲ್ಲೆ ನಡೆಸಿದ್ದಾರೆ. ನಂತರ ಯುವಕರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹುಣಸೂರು ತಾಲೂಕು ಮೈಸೂರು ನಗರಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಕೇರಳಕ್ಕೂ ಹತ್ತಿರದಲ್ಲಿದ್ದು ಹೀಗಾಗಿ ಎರಡನೇ ಭಟ್ಕಳ ಆಗುತ್ತಿದೆ. ಯುವಕರ ಚಟುವಟಿಕೆ ಬಗ್ಗೆ ಪೊಲೀಸರು ನಿಗಾ ಇಡಬೇಕು. ತಪ್ಪಿತಸ್ಥರ ವಿರುದ್ದ ಎಷ್ಡೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ‌ ಕಠಿಣ ಕ್ರಮ ಜರುಗಿಸಬೆರಕೆಂದು ಆಗ್ರಹಿಸಿದರು. ಈ ವೇಳೆ ಸಂಜಯ್ ಮಲ್ಲಪ್ಪ. ಚಂದ್ರಮೌಳಿ. ವಿ.ಎನ್.ದಾಸ್ ಮತ್ತಿತರರಿದ್ದರು.

RELATED ARTICLES
- Advertisment -
Google search engine

Most Popular