Thursday, April 3, 2025
Google search engine

Homeಅಪರಾಧಪತಿಗೆ ಕಿರುಕುಳ ಆರೋಪ; ನಟಿ ಶಶಿಕಲಾ ವಿರುದ್ಧ ಎಫ್ಐಆರ್‌

ಪತಿಗೆ ಕಿರುಕುಳ ಆರೋಪ; ನಟಿ ಶಶಿಕಲಾ ವಿರುದ್ಧ ಎಫ್ಐಆರ್‌

ಬೆಂಗಳೂರು: ಪತಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕನ್ನಡ ಚಿತ್ರರಂಗದ ಪೋಷಕ ನಟಿ ಶಶಿಕಲಾ ಸೇರಿ ಇಬ್ಬರ ವಿರುದ್ಧ ವಿದ್ಯಾರಣಪುರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ನಿರ್ದೇಶಕ ಟಿ.ಜಿ. ಹರ್ಷವರ್ಧನ್‌ ನೀಡಿರುವ ದೂರಿನ ಮೇರೆಗೆ ಪತ್ನಿ ಶಶಿಕಲಾ ಹಾಗೂ ಸಿನಿ ಬಜ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ ಮಾಲಿಕ ಅರಣ್‌ ಕುಮಾರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

2022ರ ಮಾರ್ಚ್‌ನಲ್ಲಿ ಶಶಿಕಲಾ ಅವರನ್ನು ಮದುವೆಯಾದೆ. ಮದುವೆಯಾದ ಕೆಲ ದಿನಗಳ ನಂತರ ನಿರ್ಮಾಪಕರು, ನಿರ್ದೇಶಕ ಹಾಗೂ ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದರು. ಒಂದೆರಡು ಗಂಟೆಗಳ ಬಳಿಕ ಆಕೆಯೇ ಮನೆಯೊಳಗೆ ಕರೆಯುತ್ತಿದ್ದಳು.

ಹೀಗಾಗಿ ಈಕೆಯ ನಡವಳಿಕೆ ಬಗ್ಗೆ ಪ್ರಶ್ನಿಸಿದಾಗ, ಮತ್ತೂಮ್ಮೆ ಜೈಲಿಗೆ ಕಳುಹಿಸಬೇಕಾ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಹರ್ಷವರ್ಧನ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಈ ನಡುವೆ ಗಂಗೊಂಡನಹಳ್ಳಿಯಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ, ‘ಕಪ್ಪು ಹಣವನ್ನು ಬದಲಾಯಿಸುವ ಅವಕಾಶ ಸಿಗುತ್ತದೆ’ ಎಂದಿದ್ದರು ಎಂದು ಹರ್ಷವರ್ಧನ್‌ ದೂರಿನಲ್ಲಿ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular