Friday, April 18, 2025
Google search engine

Homeಸ್ಥಳೀಯಅನಾರೋಗ್ಯದಿಂದ ಪತಿ ಸಾವು: ಪತ್ನಿ ಆತ್ಮಹತ್ಯೆ

ಅನಾರೋಗ್ಯದಿಂದ ಪತಿ ಸಾವು: ಪತ್ನಿ ಆತ್ಮಹತ್ಯೆ

ಮೈಸೂರು: ಅನಾರೋಗ್ಯದಿಂದ ಪತಿ ಮನೆಯಲ್ಲಿ ಸಾವನ್ನಪ್ಪಿರುವ ದೃಶ್ಯ ನೋಡಿ ಆಘಾತಕ್ಕೊಳಗಾದ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಹುಣಸೂರು ನಗರದ ಕೊಯಮತ್ತೂರು ಕಾಲೋನಿಯಲ್ಲಿ ಸೋಮವಾರ ನಡೆದಿದೆ.

ಬಂಡಾರಿ ಎಂಬವರ ಪುತ್ರ ದೊರೆ (55) ಹಾಗೂ ಇವರ ಪತ್ನಿ ಸಾವಿತ್ರಿ (47) ಮೃತಪಟ್ಟಿದ್ದಾರೆ.

ಇವರಿಗೆ ಓರ್ವ ಪುತ್ರ ಹಾಗೂ ಮಗಳಿದ್ದು, ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ. ದೊರೆ ಮೂರು ತಿಂಗಳ ಹಿಂದೆ ಕೆಲಸಕ್ಕೆಂದು ಕೆ.ಆರ್. ನಗರಕ್ಕೆ ಹೋಗಿದ್ದು ಅಪಘಾತಕ್ಕೊಳಗಾಗಿ ತಮಿಳುನಾಡಿನ ಕೊಯಮತ್ತೂರು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ವಾರದ ಹಿಂದಷ್ಟೇ ಮನೆಗೆ ಬಂದಿದ್ದರು. ಐಡಿಎಫ್‌ ಸಿ ಮತ್ತು ಇಕ್ವಿಟಾಕ್ಸ್ ಬ್ಯಾಂಕ್‌ ಗಳಲ್ಲಿ ಸಾಲ ಮಾಡಿದ್ದು, ವಿವಿಧ ಸಂಘಗಳಲ್ಲಿಯೂ ಸಹ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲೇ ಇವರು ಔಷದೋಪಚಾರ ಪಡೆದುಕೊಳ್ಳುತ್ತಿದ್ದರು. ಸೋಮವಾರ ಸಾವಿತ್ರಿ, ಪತಿಗೆ ಬೆಳಿಗ್ಗೆ ತಿಂಡಿ ತಿನ್ನಿಸಿ ಔಷಧ ನೀಡಿ ಕೂಲಿ ಕೆಲಸಕ್ಕೆಂದು ಹೊರ ಹೋಗಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಪತಿ ಮೃತಪಟ್ಟ ವಿಷಯ ಗೊತ್ತಾಗಿದೆ. ಪತಿ ಮಾಡಿರುವ ಸಾಲ ತೀರಿಸುವ ಬಗೆಗಿನ ದಿಗಿಲಿನಿಂದ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮನೆ ಬಾಗಿಲು ತೆರೆದಿರುವುದನ್ನು ಕಂಡು ಪಕ್ಕದ ಮನೆಯವರು ಕೂಗಿದ್ದಾರೆ. ಈ ವೇಳೆ ಯಾರೂ ಹೊರಬರದೇ ಇದ್ದಾಗ ಅನುಮಾನಗೊಂಡು ಒಳಹೋಗಿ ನೋಡಿದಾಗ ದಂಪತಿ ಸಾವನ್ನಪ್ಪಿರುವುದು ಕಂಡುಬಂದಿದೆ.

 ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular