Monday, April 7, 2025
Google search engine

Homeಅಪರಾಧಹೈದರಾಬಾದ್‌: ಇಬ್ಬರು ತೃತೀಯ ಲಿಂಗಿಗಳ ಹತ್ಯೆ

ಹೈದರಾಬಾದ್‌: ಇಬ್ಬರು ತೃತೀಯ ಲಿಂಗಿಗಳ ಹತ್ಯೆ

ಹೈದರಾಬಾದ್‌: ಹೈದರಾಬಾದ್‌ನ ಓಲ್ಡ್ ಸಿಟಿ ಪ್ರದೇಶದ ತಪ್ಪಚಬುತ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡೈಬಾಗ್‌ ನಲ್ಲಿ ಬುಧವಾರ ಮುಂಜಾನೆ ಇಬ್ಬರು ತೃತೀಯಲಿಂಗಿಗಳನ್ನು ಹತ್ಯೆ ಮಾಡಲಾಗಿದೆ.

ಮೃತರನ್ನು ಯೂಸುಫ್ ಅಲಿಯಾಸ್ ಡಾಲಿ ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ ಎಂದು ಗುರುತಿಸಲಾಗಿದೆ.

ಪ್ರತ್ಯೇಕ ಸ್ಥಳದಲ್ಲಿ ತಮ್ಮ ಆಕ್ಟಿವಾದಲ್ಲಿ  ತಪ್ಪಚಬುತ್ರಾಕ್ಕೆ  ಅವರ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಕೋರರು ಅವರನ್ನು ದಾರಿ ತಪ್ಪಿಸಿ ದೊಡ್ಡ ಕಲ್ಲುಗಳು ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ಪೊಲೀಸರು ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದುವರೆಗೆ ಯಾರ ವಿರುದ್ಧವೂ ಕೊಲೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ನಮ್ಮ ಬಳಿ ಇಲ್ಲ. ನಿಖರವಾದ ಕಾರಣವನ್ನು ಕಂಡುಹಿಡಿಯಲು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೈದರಾಬಾದ್‌ ನ ನೈಋತ್ಯ ಡಿಸಿಪಿ ಕಿರಣ್ ಖರೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular