Friday, April 11, 2025
Google search engine

Homeಸ್ಥಳೀಯಐದು ವರ್ಷಗಳ ಕಾಲವೂ ನಿಮ್ಮ ಜೊತೆಯಲ್ಲಿಯೇ ಇದ್ದು ಕೆಲಸ ಮಾಡಲಿದ್ದೇನೆ: ಶಾಸಕ ಮಂಜು

ಐದು ವರ್ಷಗಳ ಕಾಲವೂ ನಿಮ್ಮ ಜೊತೆಯಲ್ಲಿಯೇ ಇದ್ದು ಕೆಲಸ ಮಾಡಲಿದ್ದೇನೆ: ಶಾಸಕ ಮಂಜು


ಕೆ.ಆರ್.ಪೇಟೆ: ಕಳೆದ ಹಲವು ವರ್ಷಗಳಿಂದಲೂ ನಾನು ಜನರ ಮಧ್ಯೆ ಇದ್ದು ಕೆಲಸ ಮಾಡಿಕೊಂಡು ಬಂದಿದ್ದೇನೆ. ಮುಂದಿನ ಐದು ವರ್ಷಗಳ ಕಾಲವೂ ನಿಮ್ಮ ಜೊತೆಯಲ್ಲಿಯೇ ಇದ್ದು ಕೆಲಸ ಮಾಡಲಿದ್ದೇನೆ ಎಂದು ಶಾಸಕ ಮಂಜು ತಿಳಿಸಿದರು.
ಅವರು ಪಟ್ಟಣದ ಹೊರವಲಯದ ಜಯಮ್ಮರಾಮಸ್ವಾಮಿ ಸಮುದಾಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಹೆಚ್.ಟಿ.ಮಂಜು ಅಭಿಮಾನಿಗಳು ಹಾಗೂ ಹಿರಿಯ ನಾಗರೀಕರ ವತಿಯಿಂದ ಏರ್ಪಡಿಸಿದ್ದ ನಾಗರೀಕ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಒಬ್ಬ ಸಾಮಾನ್ಯ ರೈತನ ಮಗನನ್ನು ನೀವೆಲ್ಲರೂ ಸೇರಿ ಶಾಸಕನ್ನಾಗಿ ಮಾಡಿದ್ದೀರಿ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಹೆಗಲುಕೊಟ್ಟು ಕೆಲಸ ನಿರ್ವಹಿಸಿದ್ದೀರಿ. ನನ್ನ ಚುನಾವಣೆಯಲ್ಲಿ ಎಲ್ಲರೂ ವಾರಾನುಗಟ್ಟಲೆ ನಿಮ ಕೆಲಸಬಿಟ್ಟು ನನ್ನ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೀರಿ. ನಾನು ತಾಲ್ಲೂಕಿನಲ್ಲಿ ೨೦ ದಿನಗಳು ಕೇಂದ್ರ ಸ್ಥಾನದಲ್ಲಿ ಇದ್ದು ಕೆಲಸ ಮಾಡಲಿದ್ದೇನೆ. ನಾನು ಈ ಹಿಂದೆಯೂ ಜನರ ಮಧ್ಯೆ ಇದ್ದು ಕೆಲಸಮಾಡಿದ್ದೇನೆ ಮುಂದೆಯೂ ಜನರೊಂದಿಗೆ ಇರುತ್ತೇನೆ. ನಾನು ಹೋರಾಟದ ಬದುಕಿನಿಂದ ಬಂದಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವಿದ್ದರೂ ವಿರೋಧ ಪಕ್ಷದ ಸ್ಥಾನದಲ್ಲಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಎರಡು ಲಕ್ಷದ ಇಪ್ಪತ್ರು ಸಾವಿರ ಮತದಾರರಿಗೂ ಶಾಸಕನಾಗಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿದ್ದೇನೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯ. ನೀವೇ ನನ್ನ ಹುಟ್ಟುಹಬ್ಬಕ್ಕೆ ಹಣ ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದೀರಿ. ನಿಮಗೆ ಆಭಾರಿಯಾಗಿದ್ದೇನೆ ಎಂದರು.
ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಪುಟ್ಟಸ್ವಾಮಿಗೌಡ ಮಾತನಾಡಿ ಇಡೀ ಜಿಲ್ಲೆಯಲ್ಲಿ ಬೇರೆ ಪಕ್ಷದ ಅಲೆ ಇದ್ದರೂ ತಾಲ್ಲೂಕಿನಲ್ಲಿ ನೀವುಗಳು ನಿರೀಕ್ಷೆ ಮೀರಿ ಮತ ನೀಡುವ ಮೂಲಕ ಅವರನ್ನು ಜಯಗಳಿಸಿದ್ದೀರಿ. ತಾಲ್ಲೂಕಿನ ತೋಟಗಾರಿಕೆ, ಕೃಷಿ, ಕಂದಾಯ ಮುಂತಾದ ಇಲಾಖೆಗಳಲ್ಲಿ ಭ್ರ?ಚಾರಕ್ಕೆ ಅವಕಾಶವಿಲ್ಲದಂತೆ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುತ್ತದೆ. ಮಂಜಣ್ಣ ಅವರು ವಿವಿಧ ಸ್ಥರಗಳಲ್ಲಿ ಆಡಳಿತದ ಅನುಭವ ಇರುವ ಕಾರಣ ಅವರು ತಾಲ್ಲೂಕನ್ನು ಅಭಿವೃದ್ಧಿ ಕಡೆಗೆ ಕೊಂಡೋಯ್ಯಲಿದ್ದಾರೆ. ತಾಲ್ಲೂಕಿನಲ್ಲಿ ಜಡ್ಡುಗಟ್ಟಿದ ಆಡಳಿತವಿದ್ದು ಅದನ್ನು ಸರಿದಾರಿಗೆ ತರಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಮಂಜಣ್ಣ ಜನಸಾಮಾನ್ಯರೊಂದಿಗೆ ಸುಲಭವಾಗಿ ಬೆರೆಯುವ ಗುಣವನ್ನು ಹೊಂದಿದ್ದಾರೆ. ಮುಂದಿನ ದಿನಗಳ ಅವರಿಗೆ ದೇವರು ಇನ್ನೂ ಹೆಚ್ಚಿನ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ನಾಗರೀಕರ ವತಿಯಿಂದ ಮಂಜು ದಂಪತಿಗಳಿಗೆ ಬೆಳ್ಳಿಗದೆ ನೀಡಿ ಅಭಿನಂದಿಸಲಾಯಿv
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ, ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಮನ್ಮುಲ್ ನಿರ್ದೇಶಕ ಡಾಲುರವಿ, ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ರಾಜ್ಯಜೆಡಿಎಸ್ ಪ್ರಧಾನಕಾರ್ಯದರ್ಶಿ ಕುರುಬಹಳ್ಳಿನಾಗೇಶ್, ಜಿಲ್ಲಾ ಜೆಡಿಎಸ್ ಪ್ರಧಾನಕಾರ್ಯದರ್ಶಿ ಬಿ.ಎಂ.ಕಿರಣ್, ಹಿರಿಯ ಉಪಾದ್ಯಕ್ಷ ನಾಗೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಮಹಿಳಾ ಘಟಕದ ಅಧ್ಯಕ್ಷೆ ರೇಖಾಲೋಕೇಶ್, ಯುವಘಟಕದ ಅಧ್ಯಕ್ಷ ಅಶ್ವಿನ್‌ಕುಮಾರ್, ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ಜೆಡಿಎಸ್ ಮುಖಂಡ ಎ.ಆರ್.ರಘು, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಧನಂಜಯ, ಶಾಸಕರ ತಂದೆ ತಿಮ್ಮೇಗೌಡ, ತಾಯಿ ಜಯಮ್ಮ, ಧರ್ಮಪತ್ನಿ ರಮಾಮಂಜು, ಸಹೋದರ ಹೆಚ್.ಟಿ.ಲೋಕೇಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ಬಲದೇವ್, ಮಂಜುನಾಥ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಶಿವರಾಮೇಗೌಡ, ತಾಲ್ಲೂಕು ಕಸಾಪ ಅದ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ರಾಜ್ಯ ಉಪಾದ್ಯಕ್ಷ ಧರ್ಮಪ್ಪ, ಜೆಡಿಎಸ್ ಮುಖಂಡರಾದ ಮೋಹನ್, ಶ್ರೀನಿವಾಸನಾಯಕ, ಕಾಯಿ ಮಂಜೇಗೌಡ, ಕಾರಿಗನಹಳ್ಳಿ ಕುಮಾರ್, ಕೆ.ಆರ್.ಹೇಮಂತ್ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

RELATED ARTICLES
- Advertisment -
Google search engine

Most Popular