Monday, April 7, 2025
Google search engine

Homeಸ್ಥಳೀಯನನ್ನ ಗೆಲುವಿಗೆ ಶ್ರಮಿಸದವರೆಲ್ಲರಿಗೂ ಸದಾಋಣಿ: ಶಾಸಕ ಡಿ.ರವಿಶಂಕರ್

ನನ್ನ ಗೆಲುವಿಗೆ ಶ್ರಮಿಸದವರೆಲ್ಲರಿಗೂ ಸದಾಋಣಿ: ಶಾಸಕ ಡಿ.ರವಿಶಂಕರ್


ಕೆ.ಆರ್.ನಗರ: ನನ್ನ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಸಮಾಜದ ಮುಖಂಡರುಗಳಿಗೆ ಹಾಗೂ ಬಂಧುಗಳಿಗೆ ಸದಾ ಋಣಿಯಾಗಿರುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹದಿನೈದು ವರ್ಷಗಳ ಕಾಲ ಕುರುಬ ಸಮಾಜಕ್ಕೆ ರಾಜಕೀಯ ಅಧಿಕಾರವಿಲ್ಲದಿದ್ದರೂ ಮತ್ತೊಬ್ಬರ ಮನೆ ಬಾಗಿಲಿಗೆ ಹೋಗದೆ ಸ್ವಾಭಿಮಾನದ ಬದುಕು ನಡೆಸಿರುವ ಸಮಾಜದ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು ತಾಲ್ಲೂಕಿನಲ್ಲಿ ಒಬ್ಬರೇ ಸಾಹೇಬರು, ನಾನು ಕೇವಲ ಸಾಮಾನ್ಯ ಶಾಸಕ, ನೀವು ನನ್ನನ್ನು ಸಾಹೇಬರು ಎಂದು ಕರೆಯಬಾರದು ನನ್ನನ್ನು ಕಿರಿಯರು ರವಿಯಣ್ಣ, ಹಿರಿಯರು ರವಿ ಎಂದು ಕರೆಯಿರಿ ಇದು ನನ್ನ ಮನವಿ ಎಂದರು.
ಕುರುಬ ಸಂಘದ ಆಸ್ತಿ ರಕ್ಷಣೆ ಮಾಡುವುದರ ಜತೆಗೆ ಅಭಿವೃದ್ಧಿಪಡಿಸಲು ಬದ್ಧನಾಗಿದ್ದು, ಆಗಬೇಕಾಗಿರುವ ಸಮಾಜದ ಕೆಲಸಗಳ ಬಗ್ಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಕುರುಬರ ಸಂಘದ ಪದಾಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ.
ಟಿ.ಮರಿಯಪ್ಪ ವಿದ್ಯಾ ಸಂಸ್ಥೆಯ ಆವರಣದಲ್ಲಿ ಡಿಪ್ಲೋಮಾ ಕಾಲೇಜು ಮತ್ತು ಪಕ್ಕದಲ್ಲಿರುವ ನಿವೇಶನದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯ ಆರಂಭಿಸಲು ಪ್ರಯತ್ನಿಸುವುದರ ಜತೆಗೆ ನಿರ್ಮಾಣ ಹಂತದಲ್ಲಿರುವ ಕನಕ ಸಮುದಾಯ ಭವನಕ್ಕೆ ಸರ್ಕಾರ ಮತ್ತು ವಿವಿಧೆಡೆಯಿಂದ ಅನುದಾನ ತಂದು ಭವನದ ಕಾಮಗಾರಿ ಪೂರ್ಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಲೋಕಾರ್ಪಣೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಅಮಿತ್.ವಿ.ದೇವರಹಟ್ಟಿ ಮಾತನಾಡಿ ಕುರುಬರ ಸಂಘದ ಪದಾಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರು ತಮ್ಮ ಪರ ಮತ ಕೇಳಲು ಗ್ರಾಮಗಳಿಗೆ ಹೋದಾಗ ಅಲ್ಲಿನ ಸಮಸ್ಯೆಗಳನ್ನು ಗ್ರಾಮಸ್ಥರು ತಿಳಿಸಿದ್ದು, ಇವುಗಳನ್ನು ಪರಿಹರಿಸಲು ತಾವು ಒತ್ತುಕೊಟ್ಟು ಕೆಲಸ ಮಾಡಬೇಕು ಎಂದು ಶಾಸಕರಿಗೆ ಸಲಹೆ ನೀಡಿದರು.
ಅಭಿವೃದ್ಧಿ ಕೆಲಸ ಮಾಡುವಲ್ಲಿ ಸ್ವಲ್ಪ ಕಡಿಮೆಯಾದರೂ ತೊಂದರೆಯಿಲ್ಲ. ಆದರೆ ತಮ್ಮ ನಡವಳಿಕೆಯಲ್ಲಿ ಬದಲಾವಣೆ ಆಗಬಾರದು. ಆಗ ಜನತೆ ಕೈಬಿಡುವುದಿಲ್ಲ ಎಂದು ಪರೋಕ್ಷವಾಗಿ ಸಾ.ರಾ. ಮಹೇಶ್‌ರವರಿಗೆ ಟಾಂಗ್ ನೀಡಿದ್ದರು. ಕುರುಬ ಸಮಾಜದ ಸಹಕಾರದಿಂದ ಎಚ್.ವಿಶ್ವನಾಥ್ ಕುಟುಂಬ ಈವರೆಗೂ ರಾಜಕಾರಣದಲ್ಲಿ ಇರಲು ಸಾಧ್ಯವಾಯಿತು. ಇದೇ ಸಹಕಾರವನ್ನು ಶಾಸಕ ಡಿ.ರವಿಶಂಕರ್ ಅವರಿಗೂ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಬೆಳ್ಳಿ ಗದೆ ನೀಡಿ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ಕುಕ್ಕುಟ ಮಹಾಮಂಡಲದ ನಿರ್ದೇಶಕ ಎಸ್.ಸಿದ್ದೇಗೌಡ, ಸಂಘದ ಅಧ್ಯಕ್ಷ ಚೀರ್‍ನಹಳ್ಳಿಶಿವಣ್ಣ, ಉಪಾಧ್ಯಕ್ಷ ಸಾಕರಾಜು, ಸಂಘದ ರಾಜ್ಯ ನಿರ್ದೇಶಕ ಮಾದೇಗೌಡ ಮಾತನಾಡಿದರು. ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಬಿ.ಎಂ.ಗಿರೀಶ್, ನಿರ್ದೇಶಕರಾದ ರಾಮಕೃಷ್ಣೇಗೌಡ, ಮೂಡಲಕೊಪ್ಪಲು ಎಂ.ಜೆ.ಕೃಷ್ಣೇಗೌಡ, ಕೆ.ಎಂ.ಶ್ರೀನಿವಾಸ್, ಅಪ್ಪಾಜಿಗೌಡ, ಬಿ.ಎಂ.ನಾಗರಾಜು, ರಾಜಶೇಖರ್, ಕೋಳಿಪ್ರಕಾಶ್, ಮಹದೇವ್, ಕೆ.ಪಿ.ಮಂಜುನಾಥ್, ಗುಡ್ಡಪ್ಪ, ಹುಚ್ಚೇಗೌಡ, ಮುಖಂಡರಾದ ಮಂಚನಹಳ್ಳಿರವಿ, ಬಿ.ಎಸ್.ಚಂದ್ರಹಾಸ, ಜಿ.ಎನ್.ರಘು, ಕೆ.ಪಿ.ಯೋಗೇಶ್, ಡಾ.ನಟರಾಜು, ರಾಜೇಗೌಡ, ಜಿ.ಎಸ್.ವೆಂಕಟೇಶ್, ಜಿ.ಎಂ.ಹೇಮಂತ್ ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular