Thursday, April 3, 2025
Google search engine

Homeರಾಜ್ಯಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ ಸವಾಲ್

ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ ಸವಾಲ್

ಹಾಸನ: ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ, ನನಗೆ ಕೊಟ್ಟಿದ್ದನ್ನ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.

ಜಿಲ್ಲೆಯ ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಹೆಚ್.ಎಸ್ ಪ್ರಕಾಶನನ್ನು ನಾಲ್ಕು ಬಾರಿ ಗೆಲ್ಲಿಸಿದ್ದರು. ೨೦೧೩ರಲ್ಲಿ ಪ್ರಕಾಶ್‌ಗೆ ಸೀಟ್ ಕೊಡಿಸಿಕೊಂಡು ಬಂದೆ, ಅಲ್ಪಸಂಖ್ಯಾತರಿಂದಾಗಿ ಪ್ರಕಾಶ್ ಸೋತರು ಎಂದು ಹೇಳಿದ್ದಾರೆ.

ಹಾಸನ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು. ಪಾಪ ಪ್ರಜ್ವಲ್‌ಗೂ ಗೊತ್ತಾಗಲ್ಲ, ಅವನು ಒಳ್ಳೆಯ ಹುಡುಗ. ನಮ್ಮ ದುಡ್ಡು ತಗೊಂಡು ಬೇರೆ ಎಲ್ಲೋ ಹಾಕಿದ್ದರು. ಅವರೆಲ್ಲಾ ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗುತ್ತಾರೆ. ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೆಗೌಡರ ಮಗನೇ ಅಲ್ಲ ಎಂದು ತಿರುಗೇಟು ನೀಡಿದ್ದಾರೆ

RELATED ARTICLES
- Advertisment -
Google search engine

Most Popular