ಮಂಗಳೂರು (ದಕ್ಷಿಣ ಕನ್ನಡ): ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡಿತಾ ಇದೆ. ಆದ್ರೆ, ಇದೆಲ್ಲಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಮ್ಮ ನಾಯಕರು ಉತ್ತರ ಕೊಡ್ತಾ ಇರೋ ಕಾರಣ ಚರ್ಚೆ ಹುಟ್ಟಿಕೊಂಡಿರುವುದು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿಚಾರವನ್ನು ಎಐಸಿಸಿ ಕಮಿಟಿ ತೀರ್ಮಾನಿಸುತ್ತದೆ. ಆದ್ರೆ, ಸಿದ್ದರಾಮಯ್ಯ ಅವರ ಪ್ರಕರಣದ ತೀರ್ಪು ಇನ್ನೂ ಬಂದಿಲ್ಲವಾದ ಕಾರಣ ಕಾನೂನು ಹೋರಾಟದ ವೇಳೆ ಹೇಳಿಕೆ ನೀಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ನಮ್ಮಲ್ಲಿ 135 ಶಾಸಕರಿದ್ದಾರೆ. ಅವರೆಲ್ಲರೂ ಒನ್ ಎಮಾಂಗ್ ಈಕ್ವಲ್ ಎನ್ನುವಂತೆ ಹೇಳಿಕೆ ನೀಡ್ತಾ ಇದ್ದಾರೆ. ಹೇಳಿಕೆಯನ್ನು ನೀಡಲು ಅವರು ಸ್ವತಂತ್ರರಾಗಿದ್ದಾರೆ. ಆದ್ರೆ ನಾನು ಯಾವುದೇ ರೇಸ್‌ನಲ್ಲಿ ಇಲ್ಲ. ನಾನು ಓಡುವ ಕುದುರೆಯೂ ಅಲ್ಲ ಕತ್ತೆಯೂ ಅಲ್ಲ ಎಂದು ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.