ಬೆಂಗಳೂರು: ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ನನಗಿಲ್ಲ. ನನ್ನ ಪುತ್ರ ರಾಜಕೀಯಕ್ಕೆ ಬರುವುದಿಲ್ಲ ಎಂದು ಮಾಜಿ ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೋಕಸಭೆಗೆ ಹೋಗುವ ಇಚ್ಚೆ ಇಲ್ಲ. ನನ್ನ ಮಗನಿಗೆ ಲೋಕಸಭೆಗೆ ಟಿಕೆಟ್ ಕೇಳಿಲ್ಲ. ಪುತ್ರನನ್ನು ರಾಜಕಾರಣಿ ಮಾಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಬಿಡುವ ಮನಸ್ಸಿನಲ್ಲಿ ನಾನಿಲ್ಲ. ಆದರೆ, ಕೆಲವರು ನಾವು ಪಕ್ಷ ಬೀಡುತ್ತೇವೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮಯದಲ್ಲೂ ಅಪಪ್ರಚಾರ ಮಾಡಿದ್ದರು. ಇದರ ಹಿಂದೆ ಅಮಾನತು ಆದ ವ್ಯಕ್ತಿ ಇದ್ದರು. ಕ್ಷೇತ್ರದಲ್ಲಿ ಕೆಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಇಂಥವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ ಎಂದರು.