Monday, December 2, 2024
Google search engine

Homeರಾಜ್ಯಸುದ್ದಿಜಾಲನಿಖಿಲ್ ಸೋಲಿಗೆ ನಾನೇ ಹೊಣೆ: ಸಚಿವ ಹೆಚ್.ಡಿ ಕುಮಾರಸ್ವಾಮಿ

ನಿಖಿಲ್ ಸೋಲಿಗೆ ನಾನೇ ಹೊಣೆ: ಸಚಿವ ಹೆಚ್.ಡಿ ಕುಮಾರಸ್ವಾಮಿ

ರಾಮನಗರ: ನಾನು ಶಪಥ ಮಾಡ್ತೇನೆ‌. ರಾಮನಗರದಿಂದ ಜೆಡಿಎಸ್ ಖಾಲಿ ಮಾಡಿಸಿದ್ದೇನೆ ಅಂದವರಿಗೆ ಉತ್ತರ ಕೊಡ್ತೇನೆ. ಮುಂದಿನ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನವನ್ನು ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲುತ್ತೆ. ನಮ್ಮನ್ನ ಅಷ್ಟು ಸುಲಭವಾಗಿ ಜಿಲ್ಲೆಯಿಂದ ಖಾಲಿ ಮಾಡಿಸಲು ಸಾಧ್ಯವಿಲ್ಲ. ನನ್ನ, ನಿಖಿಲ್ ರಾಜಕೀಯ ಇಲ್ಲಿಂದಲೇ ಆರಂಭ, ಇಲ್ಲಿಯೇ ಅಂತ್ಯ. ಮುಂದಿನ ಚುನಾವಣೆಯಲ್ಲಿ ಇದೇ ಚನ್ನಪಟ್ಟಣದಲ್ಲಿ 25 ಸಾವಿರ ಲೀಡ್ ಬರುತ್ತೆ ಎಂದು ಸಚಿವರು ಶಪಥ ಮಾಡಿದರು.

ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಅಹಿಂದ ಸಮಾವೇಶ ವಿಚಾರಕ್ಕೆ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡ್ತಾರೆ. 17 ತಿಂಗಳಿನಿಂದ ಆ ಸಮುದಾಯಕ್ಕೆ ಏನು ರಕ್ಷಣೆ ಕೊಟ್ಟಿದ್ದಾರಾ.? ಅವರ ಸ್ವಾಭಿಮಾನ ಉಳಿಸುವ ಕೆಲಸ ಮಾಡಿದ್ದೀರಾ.? ಅವರ ಹಣವನ್ನ ಲೂಟಿ ಮಾಡಿರೋದೇ ಕೊಡುಗೆಯಾ‌.? ಎಂದು ಸಚಿವರು ಕಿಡಿಕಾರಿದರು.

ಒಕ್ಕಲಿಗ ಸ್ವಾಮೀಜಿಗೆ ನೋಟಿಸ್ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಸ್ವಾಮೀಜಿಗೆ ನೋಟಿಸ್ ಕೊಟ್ಟಿರುವವರು ನನ್ನ ಮೇಲೆ ವರ್ಣನಿಂದನೆ ಮಾಡಿದ್ರಲ್ಲ ಅವರ ಮೇಲೆ ಎನು ಕ್ರಮ ಕೈಗೊಂಡರಿ. ಒಂದು ಕೇಸ್ ಆಗಿಲ್ಲ, ಯಾಕೆ ನೋಟಿಸ್ ಕೊಟ್ಟಿಲ್ಲ. ರಾಜ್ಯದಲ್ಲಿ ಹರಾಜಕತೆ ಪ್ರಾರಂಭ ಆಗುತ್ತೆ ನೋಡಿ. ಕಾಂಗ್ರೆಸ್ ನವರ ಓಲೈಕೆ ರಾಜಕೀಯ ಏನಾಗ್ತಿದೆ ಗೊತ್ತು ಓಲೈಕೆ ರಾಜಕಾರಣ ಬಿಡಲಿ ಅಂತ ಸ್ವಾಮೀಜಿ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ದೇವೇಗೌಡರು ಏನ್ ಮಾಡಿದ್ದಾರೆ ಅಂತ ಕೇಳ್ತಾರಲ್ಲ. ಚನ್ನಪಟ್ಟಣ ಕನಕಪುರಕ್ಕೆ ವಿದ್ಯುತ್ ಶಕ್ತಿ ಕೊಟ್ಟವರು ಯಾರು.? ನಂಜುಡಪ್ಪ ವರದಿಯಲ್ಲಿ 173 ಸ್ಥಾನದಲ್ಲಿತ್ತು. ಈ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ನೀವು ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡ್ತೀರಾ. 2008 ರ ಬಳಿಕ 2013 ಕ್ಕೆ ಏನಾಯ್ತು. 2018ಕ್ಕೆ ನಮ್ಮ ಹತ್ರ ಬಂದಿದ್ರಲ್ಲ ಇವತ್ತು 136 ಅಂತ ಹೇಳ್ತೀರಲ್ಲ, ಬಳಿಕ 36 ಸೀಟು ಗೆಲ್ಲಿ ನೋಡೋಣ ಸಿಎಂ ಸಿದ್ರಾಮಯ್ಯ ನವರೇ ನಿಮಗೆ ನಾಚಿಕೆ ಇದೇಯ ಎಂದು ವಾಗ್ದಾಳಿ ನಡೆಸಿದರು.

ಇವಿಎಂ ಮೇಲೆ ಕಾಂಗ್ರೆಸ್ ಅನುಮಾನ ವಿಚಾರಕ್ಕೆ ಮಾತನಾಡಿದ ಸಚಿವರು, ಓಟಿಂಗ್ ಮಿಷನ್ ಇಂಪ್ಲಿಮೆಂಟ್ ಮಾಡಿದ್ದು ಯಾರು.? ಇದೇ ಕಾಂಗ್ರೆಸ್ ಸರ್ಕಾರ ತಾನೆ‌. ಇವಿಎಂ ಹ್ಯಾಕ್ ಕರ್ನಾಟಕದಲ್ಲಿ ಮಾಡಿದ್ದಾರಾ. ಅದಕ್ಕೆ ಅದರ ಮೇಲೆ ಆರೋಪ ಮಾಡಿದ್ದಾರಾ.? ಎಂದು ಕಾಂಗ್ರೆಸ್ ನಾಯಕರಿಗೆ ಹೆಚ್ಡಿಕೆ ಟಾಂಗ್ ನೀಡಿದರು.

ಕ್ಷೇತ್ರದ ಜನ 87 ಸಾವಿರ ಮತಗಳ ನೀಡಿದ್ದಾರೆ. ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಮುಂದಿ‌ನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉತ್ತರ ಕೊಡ್ತೀವಿ.ಕಾರ್ಯಕರ್ತರ ಭಾವನೆ ನಿಖಿಲ್ ಚನ್ನಪಟ್ಟಣ ಇರಲಿ ಅಂತಿದೆ. ಆದರೆ ನಿಖಿಲ್ ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ಈಗ ಪಕ್ಷದ ಸಂಘಟನೆಯ ಜವಾಬ್ದಾರಿ ನಿಖಿಲ್ ಮೇಲಿದೆ ಎಂದರು.

ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಮೊನ್ನೆ ಅಚ್ಚುಕಟ್ಟಾಗಿ ಚುನಾವಣೆ ಮಾಡಿದ್ದಾರೆ. ಮುಂದೆ ಈ ಪಕ್ಷ ಅಧಿಕಾರಕ್ಕೆ ತರಲು ಅವರಿಗೆ ವಿಶ್ವಾಸ ಮೂಡಿದೆ. ನಿಖಿಲ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡ್ತಿವೆ. ಮುಂದಿನ ಸಂಕ್ರಾಂತಿಯಿಂದ ಪಕ್ಷ ಸಂಘಟನೆ ಕಾರ್ಯಕ್ರಮ ಆರಂಭಿಸುತ್ತೇವೆ. ಚುನಾವಣೆ ಸೋತಂತ ಸನ್ನಿವೇಶದಲ್ಲಿ ಕಾರ್ಯಕರ್ತರಲ್ಲಿ ಆಘಾತ, ಇರುವ ಕಾರಣ ಬಹಳಷ್ಟು ಜನ‌ ಬರುತ್ತಾರೆ ಅಂತ ನಿರೀಕ್ಷೆ ಇರಲಿಲ್ಲ ಅಂತ ನಿಖಿಲ್ ಕುಮಾರಸ್ವಾಮಿ ಅಂದಿದ್ದಾರೆ.

ಮಂಡ್ಯ ಲೋಕಸಭೆಗೆ ನಿಖಿಲ್ ರನ್ನು ನಿಲ್ಲಿಸಬೇಕು ಅಂತ ಸಾ ರಾ ಮಹೇಶ್ ಸಾವಿರ ಸಲ ಹೇಳಿದ್ರು ಆದರೆ‌ ನಿಖಿಲ್ ಕುಮಾರಸ್ವಾಮಿ ನಾನು ಮಂಡ್ಯ ಬರೊದು ಸೂಕ್ತ ಅಲ್ಲ ಅಂತ ನಿಖಿಲ್ ಕಠಿಣ ನಿರ್ಧಾರ ಮಾಡಿದ್ರು. ನಿಖಿಲ್ ಅಧಿಕಾರಕ್ಕೆ ಹಪಹಪಿಸಿದ್ರೆ ಆಗಲೇ ಮಂಡ್ಯದಿಂದ ಚುನಾವಣೆಗೆ ನಿಲ್ಲಬಹುದಿತ್ತು ಎಂದರು.

ಆದರೆ ದೇವರ‌ ಇಚ್ಛೆ.ಇವತ್ತು ದೇವೇಗೌಡರ ಕುಟುಂಬ ಉಳಿದಿದ್ರೆ. ಒಂದು ಕಡೆ ಬೆಳೆಸಿದ ಅಭಿಮಾನಿಗಳು, ಇನ್ನೊಂದು ದೇವರ ಅನುಗ್ರಹ ಇರೋದ್ರಿಂದ ಬದುಕಿದ್ದೇವೆ. ನಮ್ಮನ್ನು ಅವರು ಟೂರಿಂಗ್ ಟಾಕೀಸ್ ಅಂತಾರೆ ಇವತ್ತು ಯಾವುದಾದರೂ ಎರಡು ಜಿಲ್ಲೆಯಲ್ಲಿ ನಿಂತು ಗೆಲ್ಲುವ ತಾಕತ್ತು ಇರೋದು ಜೆಡಿಎಸ್ ಮಾತ್ರ.ಈ‌ ಚುನಾವಣೆಗೆ ನಿಖಿಲ್ ನಿಲ್ಲಿಸಬೇಕು ಅಂತ ಇರಲಿಲ್ಲ. ಒಂದು ವೇಳೆ ಇಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ಲಸಲೇ ಬೇಕಿದ್ದರೆ ಲೋಕಸಭೆ ಚುನಾವಣಾ ಬಳಿಕವೇ ವೇದಿಕೆ ನಿರ್ಮಾಣ ಮಾಡ್ತಿದ್ದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular